ವಿಟ್ಲ: ಮಾಂಡೊವಿ ಮೋಟಾರ್ಸ್‌ ಪ್ರೈವೇಟ್ ಲಿಮಿಟೆಡ್‌ನ 28ನೆ ಉಪಶಾಖೆ ಉದ್ಘಾಟನೆ

Update: 2016-07-14 12:09 GMT

ವಿಟ್ಲ, ಜು.14: ದೇಶದೆಲ್ಲೆಡೆ ಮಾರುತಿಯು ಮನೆ ಮಾತಾಗಿರುವ ಬ್ರಾಂಡ್ ಆಗಿದೆ ಎಂದು ವಿಟ್ಲದ ಉದ್ಯಮಿ ಸುಬ್ರಾಯ ಪೈ ಹೇಳಿದರು.

ವಿಟ್ಲ-ಮೇಗಿನಪೇಟೆಯ ಜಿಶನ್ ಕಾಂಪ್ಲೆಕ್ಸ್‌ನಲ್ಲಿ ಮಾಂಡೊವಿ ಮೋಟಾರ್ಸ್‌ ಪ್ರೈವೇಟ್ ಲಿಮಿಟೆಡ್‌ನ 28ನೆ ಉಪಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೂರು ಫ್ಯಾಮಿಲಿಯು ಆರಂಭಿಸಿದ ಈ ಮಾಂಡೊವಿ ಸಂಸ್ಥೆಯು ಇದೀಗ ಹತ್ತು-ಹಲವು ಊರುಗಳಲ್ಲಿ ಪ್ರಜ್ವಲಿಸುತ್ತಿದೆ. ವಿಟ್ಲದಲ್ಲಿ ಪೂರ್ಣ ಪ್ರಮಾಣದ ಶೋರೂಂ ಆರಂಭಗೊಳ್ಳುವುದರೊಂದಿಗೆ ಸಂಸ್ಥೆಯು ಇನ್ನಷ್ಟು ಅಭಿವೃದ್ದಿ ಹೊಂದಲಿ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಟ್ಲ ಜೆಸಿಐ ಮಾಜಿ ಅಧ್ಯಕ್ಷ ರಶೀದ್ ವಿಟ್ಲ ಮಾತನಾಡಿ, ಉದ್ಯಮಕ್ಕೆ ಪೂರಕವಾಗಿರುವ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಮಾಂಡೊವಿ ಸಂಸ್ಥೆಯು ಉತ್ತಮ ಸೇವೆಯನ್ನು ಕೂಡಾ ನೀಡುತ್ತಿದೆ ಎಂದರು.

ಸಂಸ್ಥೆಯ ಚೀಪ್ ಜನರಲ್ ಮ್ಯಾನೇಜರ್ ಪಾರ್ಶ್ವನಾಥ್ ಮಾತನಾಡಿ, ಮಾಂಡೋವಿ ಮೋಟಾರ್ಸ್‌ ಸಂಸ್ಥೆಯು ಕರ್ನಾಟಕ ರಾಜ್ಯದ ಪ್ರಥಮ ಮಾರುತಿ ಡೀಲರ್‌ಶಿಪ್ ಹೊಂದಿದ ಸಂಸ್ಥೆಯಾಗಿದೆ. 1984ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡ ಈ ಸಂಸ್ಥೆಯು 1986ರಲ್ಲಿ ಮೈಸೂರು, 1989ರಲ್ಲಿ ಮಂಗಳೂರಿನಲ್ಲಿ ಸೇವೆಯನ್ನು ಆರಂಭಿಸಿದೆ. ರಾಜ್ಯದ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಅತ್ಯಧಿಕ ಮಾರಾಟ ಮತ್ತು ಸೇವೆಗಳನ್ನು ಹೊಂದಿದ 8 ಹೊಸ ಕಾರುಗಳ ಮಾರಾಟ ಶೋರೂಂ, 8 ಮಳಿಗೆ, 6 ರೂಟ್‌ಲೆಟ್, 4 ಟ್ರೂ ವ್ಯಾಲ್ಯೂ ಶೋರೂಂ, 5 ಮಾರುತಿ ಡ್ರೈವಿಂಗ್ ಸ್ಕೂಲ್, 27 ವರ್ಕ್ ಶಾಪ್‌ಗಳು, 454 ಬೇಸ್ ಜೊತೆಗೆ ಮಾರಾಟ ಮತ್ತು ಸೇವಾ ಕ್ಷೇತ್ರವನ್ನು ಹೊಂದಿದೆ ಎಂದರು.

ವಿಟ್ಲ ಸರಕಾರಿ ಕಾಲೇಜು ಪ್ರಾಧ್ಯಾಪಕ ಜಾನ್ ಡಿಸೋಜ, ವಿಟ್ಲ ಪ್ರಸಾದ್ ಮೋಟಾರ್ಸ್‌ ಮಾಲಕ ವಿ.ಜೆ. ಹರಿಪ್ರಸಾದ್ ಬಳ್ಳಾಲ್, ಜಿಶನ್ ಕಾಂಪ್ಲೆಕ್ಸ್ ಮಾಲಕ ಇಬ್ರಾಹೀಂ, ಮಾಂಡೊವಿ ಸಂಸ್ಥೆಯ ನಿರ್ದೇಶಕ ಸಂಜಯ್ ರಾಯ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಸಂಸ್ಥೆಯ ಪಾಣೆಮಂಗಳೂರು ಬ್ರಾಂಚ್ ಮ್ಯಾನೇಜರ್ ಕರುಣಾಕರ, ಸೇಲ್ಸ್ ಇನ್‌ಚಾರ್ಜ್ ಸುಜಿತ್, ಸೇಲ್ಸ್ ಮ್ಯಾನೇಜರ್ ಕಿಶನ್ ಶೆಟ್ಟಿ, ಉಮೇಶ್, ಕೃಷ್ಣರಾವ್, ಚೇತನ್, ವಿಶ್ವನಾಥ್ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ವಿಟ್ಲದ ಪ್ರಥಮ ಗ್ರಾಹಕರಾದ ರವಿ ಜೋಶಿ (ವ್ಯಾಗನಾರ್), ಕೃಷ್ಣರಾಜ್ (ಆಲ್ಟೋ ಕೆ10), ಬದ್ರುದ್ದೀನ್ (ಸ್ವಿಪ್ಟ್), ಹರೀಶ್ (ಓಮ್ನಿ), ಅಶ್ವಿನಿ ಆದರ್ಶ್ (ಸ್ವಿಪ್ಟ್)ರಿಗೆ ಕಾರಿನ ಕೀ ಹಸ್ತಾಂತರಿಸಲಾಯಿತು. ಸಂಸ್ಥೆಯ ಎಜಿಎಂ ಶಶಿಧರ್ ಕಾರಂತ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರದೀಪ್ ಭಟ್ ವಂದಿಸಿದರು. ಎಎಸ್‌ಎಂ ಮುರಳೀಧರ ಕಾರ್ಯಕ್ರಮ ನಿರೂಪಿಸಿದರು.

ಸಂಸ್ಥೆಯ ಉದ್ಘಾಟನೆಯ ಪ್ರಯುಕ್ತ ಜುಲೈ 15 ರಂದು ವಿಟ್ಲದಲ್ಲಿ ಮಾರುತಿ ವಾಹನಗಳ ಉಚಿತ ತಪಾಸಣೆ, ಮೂರು ದಿನಗಳ ಕಾಲ ಸರ್ವಿಸ್ ಚಾರ್ಜ್‌ನಲ್ಲಿ ಶೇ.10 ಹಾಗೂ ಬಿಡಿ ಭಾಗಗಳಿಗೆ ಶೇ.5 ವಿಶೇಷ ರಿಯಾಯಿತಿ ಸೌಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News