×
Ad

ಆ.1ರಂದು ಶಿಹಾಬ್ ತಂಙಳ್ ಸ್ಮರಣಾರ್ಥ ಕಾರ್ಯಕ್ರಮ

Update: 2016-07-14 19:23 IST

ಮಂಗಳೂರು, ಜು. 14: ಸಮಸ್ತ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಪಟ್ಟಿಕ್ಕಾಡ್ ಜಾಮಿಅಃ ನೂರಿಯಾ ಅರಬಿಕ್ ಕಾಲೇಜಿನ ನೇತೃತ್ವದಲ್ಲಿ ಪಾಣಕ್ಕಾಡ್ ಸಯ್ಯದ್ ಮುಹದಮಲಿ ಶಿಹಾಬ್ ತಂಙಳ್‌ರವರ ಹೆಸರಿನಲ್ಲಿ ರಾಷ್ಟ್ರೀಯ ಮಟ್ಟದ ನೂರಾರು ಹೊಸ ಯೋಜನೆಯ ಉದ್ಘಾಟನಾ ಸಮಾರಂಭ ಆಗಸ್ಟ್ 1ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಗರದ ಪುರಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಸ್ವಾಗತ ಸಮಿತಿ ರಚನೆ ಸಮಾರಂಭವು ಇಂದು ನಗರದ ನಾಲ್ಪಾಡ್ ರೆಸಿಡೆನ್ಸಿ ಹೊಟೇಲ್‌ನಲ್ಲಿ ಸಮಸ್ತದ ಪ್ರಧಾನ ಕಾರ್ಯದರ್ಶಿ ಜಾಮಿಅಃ ಶೈಖುನಾ ಆಲಿಕುಟ್ಟಿ ಉಸ್ತಾದ್‌ರ ನೇತೃತ್ವದಲ್ಲಿ ನಡೆಯಿತು.

ಸಮಾರಂಭದಲ್ಲಿ ಜಬ್ಬಾರ್ ಉಸ್ತಾದ್, ಝೈನುಲ್ ಆಬಿದೀನ್ ತಂಙಳ್, ಐ. ಮೊದಿನಬ್ಬ ಹಾಜಿ, ಚೇರ್ಕಳ ಅಬ್ದುಲ್ಲ ಹಾಜಿ, ಅಲಿ ತಂಙಳ್, ರಶೀದ್ ಫೈಝಿ, ಮಾಜಿ ಮೇಯರ್ ಅಶ್ರಫ್, ಶರೀಫ್ ಫೈಝಿ ಕಡಬ, ಮುಜೀದ್ ತಲಂಗರ, ಚೇರ್ಕಳ ಅಬ್ದುಲ್ಲ ಮುಸ್ಲಿಯಾರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಚೇರ್‌ಮನ್ ಆಗಿ ಪಾಣೆಕ್ಕಾಡ್ ಸೈಯ್ಯದ್ ಹೈದರಲಿ ಶಿಹಾಬ್ ತಂಙಳ್, ಪ್ರಧಾನ ಕಾರ್ಯದರ್ಶಿಯಾಗಿ ಕೇರಳ ಸರಕಾರದ ಮಾಜಿ ಸಚಿವ ಚೇರ್ಕಳ ಅಬ್ದುಲ್ಲ ಹಾಜಿ ಅವರನ್ನು ನೇಮಕ ಮಾಡಲಾಯಿತು.

ಸಮಸ್ತ ಉಲಮಾ-ಉಮಾರ ನೇತಾರರನ್ನು ಒಳಗೊಂಡ ಸ್ವಾಗತ ಸಮಿತಿಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು. ಆಗಸ್ಟ್ 1ರಂದು ನಡೆಯುವ ಕಾರ್ಯಕ್ರಮದಲ್ಲಿ ಪಾಣಕ್ಕಾಡ್ ಸೈಯ್ಯದ್ ಹೈದರಲಿ ಶಿಹಾಬ್ ತಂಙಳ್, ಸ್ವಾದಿಖಲಿ ಶಿಹಾಬ್ ತಂಙಳ್, ಅಬ್ಬಾಸ್ ಅಲಿ ಶಿಹಾಬ್ ತಂಙಳ್, ಆಲಿಕುಟ್ಟಿ ಉಸ್ತಾದ್, ದ.ಕ. -ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಜಬ್ಬಾರ್ ಉಸ್ತಾದ್, ಯು.ಎಂ.ಉಸ್ತಾದ್, ಖಾಸಿಂ ಉಸ್ತಾದ್, ಝೈನುಲ್ ಆಬಿದೀನ್ ತಂಙಳ್, ಅಬ್ದುಸ್ಸಮದ್ ಪುಕೋಟೂರ್ ಹಾಗೂ ಉಲಮಾ-ಉಮರಾ ವಿದ್ವಾಂಸರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು  ಪ್ರಕಟನೆಯಲ್ಲಿ ಕಾರ್ಯಕ್ರಮದ ಪತ್ರಿಕಾ ಕಾರ್ಯದರ್ಶಿ ಮುಸ್ತಫಾ ಫೈಝಿ ಕಿನ್ಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News