ಅಲ್ಪಸಂಖ್ಯಾತರ ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸುತ್ತಿದ್ದೀರಾ? ಹಾಗಿದ್ದರೆ ಈ ಸೂಚನೆಗಳನ್ನು ಪಾಲಿಸಿ
ಮಂಗಳೂರು, ಜು.14: ಕರ್ನಾಟಕ ಸರಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು ಅಲ್ಪಸಂಖ್ಯಾತ ಸಮುದಾಯದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಸಿಖ್, ಬೌದ್ಧ ಮತ್ತು ಪಾರ್ಸಿ) ವಿದ್ಯಾರ್ಥಿಗಳಿಗೆ ಪ್ರಿ-ಮೆಟ್ರಿಕ್, ಪೋಸ್ಟ್-ಮೆಟ್ರಿಕ್ ಮತ್ತು ಮೆರಿಟ್ ಕಂ ಮೀನ್ಸ್ ಸ್ಕಾಲರ್‌ಶಿಪ್‌ಗಳಿಗೆ ಅರ್ಜಿಗಳನ್ನು ಜುಲೈ 15 ರಿಂದ ಕರೆಯಲಿದೆ.
ವಿದ್ಯಾರ್ಥಿಗಳು/ಹೆತ್ತವರು/ಶಿಕ್ಷಕರು/ಬಿಇಒ/ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಇತರೆ ಸಂಬಂಧಿತ ವ್ಯಕ್ತಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ಸೂಚನೆಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ.
1. ವಿದ್ಯಾರ್ಥಿವೇತನದ ಮೊತ್ತವನ್ನು ಸುಲಭವಾಗಿ ವರ್ಗಾಯಿಸಲು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ತೆರೆಯುವುದು ಹಾಗೂ ಬ್ಯಾಂಕ್ ಖಾತೆಯನ್ನು ಜೀವಂತವಾಗಿರಿಸುವುದು.
2. ವಿದ್ಯಾರ್ಥಿವೇತನವನ್ನು ಆಧಾರ್ ಬೇಸ್ಡ್ ಪೇಮೆಂಟ್ ಮಾಡಲು ಆಧಾರ್ ಕಾರ್ಡ್‌ಗಳನ್ನು ಮಾಡಿಸುವುದು.
3. ಈಗಾಗಲೇ ಆಧಾರ್‌ಗೆ ನೋಂದಣಿ ಮಾಡಿಸಿದ್ದಲ್ಲಿ ಹಾಗೂ ಯುಐಡಿ ಸಂಖ್ಯೆ ಇದ್ದಲ್ಲಿ ಅದನ್ನು ಪಡೆಯುವುದು.
4. ಆಧಾರ್ ಸಂಖ್ಯೆಯನ್ನು ವಿದ್ಯಾರ್ಥಿಯ ಬ್ಯಾಂಕ್ ಖಾತೆ ಸಂಖ್ಯೆಗೆ ಲಿಂಕ್ ಮಾಡಿಸುವುದು. 5. ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಂಬಂಧಿತ ಇಲಾಖೆಯಿಂದ ಪಡೆಯುವುದು. ಒಂದು ವೇಳೆ ಅವಧಿ ಮುಗಿದಿದ್ದಲ್ಲಿ ನವೀಕರಿಸುವುದು. ಶಿಕ್ಷಣ ಸಂಸ್ಥೆಗಳ ಹೆಸರು (ಶಾಲೆ/ಕಾಲೇಜು ಮತ್ತು ಯಾವುದೇ ಕೋರ್ಸ್) ಪಟ್ಟಿಯಲ್ಲಿ ಇಲ್ಲದಿದ್ದಲ್ಲಿ NIC ಮತ್ತು NSP PORTALಗೆ ಸೇರಿಸಲು ನಿಗದಿತ ನಮೂನೆಯಲ್ಲಿ (ನಿರ್ದೇಶನಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ) ಮಾಹಿತಿಯನ್ನು scholarshipsdom@gmail.comಗೆ ಸಲ್ಲಿಸುವುದು.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ವೆಬ್‌ಸೈಟ್ www.gokdom.kar.nic.inನ್ನು ಅಥವಾ ಟ್ಯಾಲೆಂಟ್‌ರಿಸರ್ಚ್ ಫೌಂಡೇಶನ್, ಕಂಕನಾಡಿ ಮಂಗಳೂರು-2. ದೂ.ಸಂ.: 0824-4267883ನ್ನು ಸಂಪರ್ಕಿಸಬಹುದು ಎಂದು ಟಿಆರ್‌ಎಫ್‌ನ ಅಧ್ಯಕ್ಷ ರಿಯಾಝ್‌ಕಣ್ಣೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.