×
Ad

ಮೊಹಲ್ಲಾ ಕ್ಲಿನಿಕ್ ಸಲಹೆಗಾರ್ತಿ ಸ್ಥಾನಕ್ಕೆ ಎಎಪಿ ಸಚಿವನ ಪುತ್ರಿಯ ರಾಜೀನಾಮೆ

Update: 2016-07-14 20:31 IST

ಹೊಸದಿಲ್ಲಿ, ಜು.14: ವಿಪಕ್ಷಗಳಿಂದ ಸ್ವಜನ ಪಕ್ಷಪಾತದ ಆರೋಪ ಕೇಳಿ ಬಂದ ಕಾರಣ, ದಿಲ್ಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್‌ರ ಪುತ್ರಿ ಸೌಮ್ಯಾ, ಆಮ್ ಆದ್ಮಿ ಮೊಹಲ್ಲಾ ಕ್ಲಿನಿಕ್‌ನ ಸಲಹೆಗಾರ್ತಿಯ ಹುದ್ದೆಗೆ ಇಂದು ರಾಜೀನಾಮೆ ನೀಡಿದ್ದಾರೆ.

ಆಕೆಗೆ ಹುದ್ದೆಗೆ ‘ನಯಾಪೈಸೆ’ ನೀಡಿಲ್ಲವೆಂದು ಅವರ ತಂದೆ ಹೇಳಿದ್ದಾರೆ.

ಅದೊಂದು ಕಾರ್ಯಕಾರಿ ಹುದ್ದೆಯಲ್ಲ. ಆಕೆಯ ನೇಮಕಾತಿಯ ಕುರಿತು ವಿವಾದದಿಂದ ನೊಂದು ಸೌಮ್ಯಾ, ಮೊಹಲ್ಲಾ ಕ್ಲಿನಿಕ್‌ಗಳ ಸಲಹೆಗಾರ್ತಿಯ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆಕೆ ಏನೇ ತಪ್ಪು ಮಾಡದಿದ್ದರೂ ಅವರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿತ್ತೆಂದು ಜೈನ್ ಆರೋಪಿಸಿದ್ದಾರೆ.

 ಸೌಮ್ಯಾರನ್ನು ಕ್ಲಿನಿಕ್‌ನ ಗೌರವ ಪ್ರಭಾರಿಯನ್ನಾಗಿ ನೇಮಿಸಲಾಗಿತ್ತು. ಅವರಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಹಾಗೂ ಆರೋಗ್ಯ ಕಾರ್ಯದರ್ಶಿಯ ಸಲಹೆಗಾರ್ತಿಯಾಗಿಯೂ ಅಧಿಕಾರ ನೀಡಲಾಗಿತ್ತು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News