ಶಿರ್ತಾಡಿ : ದಾರುಸ್ಸಲಾಮ್ ಯಂಗ್‌ಮೆನ್ಸ್ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮರೋಡಿ

Update: 2016-07-14 15:24 GMT

ಮೂಡುಬಿದಿರೆ, ಜು.14: ಶಿರ್ತಾಡಿ ಮಕ್ಕಿಯ ದಾರುಸ್ಸಲಾಂ ಯಂಗ್‌ಮೆನ್ಸ್ ಕಮಿಟಿಯ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮರೋಡಿ ಆಯ್ಕೆಯಾಗಿದ್ದಾರೆ.

ವಾಲ್ಪಾಡಿ ಮುಹಿಯದ್ದೀನ್ ಜುಮ್ಮಾ ಮಸೀದಿ ಆಡಳಿತ ಸಮಿತಿಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಈ ಕಮಿಟಿಯು ಖಾಝಿ ಅಲ್‌ಹಾಕ್ ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್‌ರ ಮಾರ್ಗದರ್ಶನದಲ್ಲಿ ಅಸ್ತಿತ್ವಕ್ಕೆ ಬಂದಿದೆ.

ಗೌರವಾಧ್ಯಕ್ಷರಾಗಿ ಅಲ್‌ಹಾಜ್ ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ಇಸ್ಮಾಯೀಲ್ ಮಕ್ಕಿ, ಕಾರ್ಯದರ್ಶಿಯಾಗಿ ಇರ್ಶಾದ್ ಮಕ್ಕಿ, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಮಕ್ಕಿ, ಖಜಾಂಚಿಯಾಗಿ ಅಬ್ದುಲ್ ಕರೀಮ್, ಲೆಕ್ಕಪರಿಶೋಧಕರಾಗಿ ಮುಹಮ್ಮದ್ ಮಕ್ಕಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News