×
Ad

ನಿವೃತ್ತ ಅಧಿಕಾರಿಯ ಮನೆಯಲ್ಲಿ ಸತತ ನಾಲ್ಕನೆ ಬಾರಿ ಕಳ್ಳತನಕ್ಕೆ ಯತ್ನ!

Update: 2016-07-14 21:11 IST

ಮಂಗಳೂರು, ಜು. 14: ನಿವೃತ್ತ ಅಧಿಕಾರಿಯ ಮನೆಗೆ ಕಳವು ಯತ್ನಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಮೂಲತಃ ಕೇರಳದ ನಿವಾಸಿ ಪ್ರಸ್ತುತ ಕಪಿತಾನಿಯ ಬಳಿಯ ನೇತ್ರಾವತಿ ಬಡಾವಣೆಯಲ್ಲಿರುವ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಆಡಳಿತಾಧಿಕಾರಿ ವಿಭಾಗದ ಅಧಿಕಾರಿ ಪಿ.ನಾರಾಯಣ ಎಂಬವರ ಮನೆಯಲ್ಲಿ ಕಳವಿಗೆ ಯತ್ನಿಸಲಾಗಿದೆ. ನಾರಾಯಣ ಅವರ ಮನೆಯಲ್ಲಿ ಈ ಹಿಂದೆಯೂ ಕಳವು ನಡೆದಿದ್ದು, ಇದು ನಾಲ್ಕನೆ ಬಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯ ಮುಂದಿನ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಿನ ವಸ್ತುಗಳನ್ನು ಜಾಲಾಡಿದ್ದಾರೆ. ನಾರಾಯಣ ಅವರು ಕೇರಳಕ್ಕೆ ಹೋಗಿದ್ದು, ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಹೇಳಲಾಗಿದೆ.

ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News