ಉಡುಪಿ: ದೇವಸ್ಥಾನಕ್ಕೆ ನುಗ್ಗಿ ಸೊತ್ತು ಕಳವು
Update: 2016-07-14 21:31 IST
ಉಡುಪಿ, ಜು.14: ಪುತ್ತೂರು ಗ್ರಾಮದ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನಕ್ಕೆ ಜು.13ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೇವಸ್ಥಾನದ ದ್ವಾರ ಬಾಗಿಲಿನ ಬಳಿಯ ಕಬ್ಬಿಣದ ಕಾಣಿಕೆ ಹುಂಡಿಯ ಮೇಲ್ಬಾಗದ ಕಾಣಿಕೆ ಹಾಕುವ ತೂತನ್ನು ಬಲಾತ್ಕಾರವಾಗಿ ಮೀಟಿ ಅಗಲ ಮಾಡಿ ಹಣವನ್ನು ತೆಗೆಯಲು ಪ್ರಯತ್ನಿಸಲಾಗಿದೆ. ಅದರ ಹತ್ತಿರದಲ್ಲಿರುವ ನವಗ್ರಹ ಗುಡಿಯ ಹೊರಗೆ ಇಟ್ಟಿದ್ದ ಕಬ್ಬಿಣದ ಕಾಣಿಕೆ ಹುಂಡಿಯನ್ನು ಕಳವು ಮಾಡಲಾಗಿದೆ.
ದೇವಸ್ಥಾನದ ಮುಖ್ಯದ್ವಾರದ ಕೋಣೆಯಲ್ಲಿನ ಮಂಟಪದಲ್ಲಿದ್ದ ವಿಠಲ ರಖುಮಾಯಿ ದೇವರ ವಿಗ್ರಹಗಳೆರಡು ಹಾಗೂ ಅದಕ್ಕೆ ಅಳವಡಿಸಿರುವ ಬೆಳ್ಳಿ ಲೇಪನದ ಪ್ರಭಾವಳಿ ಹಾಗೂ ಪದ್ಮಾವತಿ ಕಲಾ ಮಂದಿರದ ಗೇಟಿನ ಬೀಗ ಒಡೆದು ಒಳಗೆ ಹೋಗಿದ್ದಾರೆ.
ಕಳವಾದ ಸೊತ್ತಿನ ವೌಲ್ಯ 11ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.