×
Ad

ವಿಚಾರಣೆಗೆ ಮೂರನೆ ಬಾರಿ ತಪ್ಪಿಸಿಕೊಂಡ ಸಲ್ಮಾನ್ ಖಾನ್

Update: 2016-07-14 22:50 IST

 ಮುಂಬೈ , ಜು.14 : ಅತ್ಯಾಚಾರದ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯ ಸಂಬಂಧ ಮಹಾರಾಷ್ಟ್ರ ಮಹಿಳಾ ಆಯೋಗದ ಮುಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಇಂದು ಕೂಡ ವೈಯಕ್ತಿಕವಾಗಿ ಹಾಜರಾಗುವುದನ್ನು ತಪ್ಪಿಸಿಕೊಂಡಿದ್ದಾರೆ.ಆದರೆ ಅತ್ಯಾಚಾರದ ಹೇಳಿಕೆಯ ಕುರಿತು ಆಯೋಗ ನೀಡಿರುವ ಸಮನ್ಸ್‌ಗೆ ಪತ್ರದ ಮೂಲಕ ಅವರು ಉತ್ತರ ನೀಡಿದ್ದಾರೆ.

 ಸಲ್ಮಾನ್ ಖಾನ್ ಆಯೋಗಕ್ಕೆ ಕಳುಹಿಸಿರುವ ಪತ್ರದಲ್ಲಿರುವ ವಿಷಯ ಇನ್ನೂ ತಿಳಿದಿಲ್ಲ.ನಟ ಕಳುಹಿಸಿದ ಪತ್ರದ ಕುರಿತು ಕಾನೂನು ಇಲಾಖೆಯ ಜತೆ ಸಮಾಲೋಚಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗ ತಿಳಿಸಿದೆ.
‘‘ನಾವು ಪತ್ರವನ್ನು ಸ್ವೀಕರಿಸಿದ್ದೇವೆ. ನಾವು ಈಗ ಅದನ್ನು ಅಧ್ಯಯನ ಮಾಡುತ್ತಿದ್ದೇವೆ.ಅದನ್ನು ನಮ್ಮ ಕಾನೂನು ಇಲಾಖೆಗೆ ರವಾನಿಸಿದ್ದೇವೆ.ಮುಂದಿನ ಕ್ರಮವನ್ನು ನಿರ್ಧರಿಸಲಿದ್ದೇವೆ’’ ಎಂದು ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಾಹತ್ಕರ್ ಹೇಳಿದ್ದಾರೆ.
   ‘ಸುಲ್ತಾನ್’ ಚಿತ್ರದಲ್ಲಿ ಕುಸ್ತಿ ಪಟುವಾಗಿ ನಟಿಸಿರುವ ಸಲ್ಮಾನ್ ಖಾನ್, ತನ್ನ ಪಾತ್ರದಲ್ಲಿ ನಟಿಸುವಾಗ ಅನುಭವಿಸಿದ ಒತ್ತಡವನ್ನು ಅತ್ಯಾಚಾರಕ್ಕೊಳಗಾದ ಮಹಿಳೆಗೆ ಹೋಲಿಕೆ ಮಾಡಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News