ಜೀವ ಕೈಯಲ್ಲಿ ಹಿಡಿದುಕೊಂಡು ಶಾಲಾ ಕಾಲೇಜಿಗೆ ತೆರಳುತ್ತಿದ್ದಾರೆ ವಿದ್ಯಾರ್ಥಿಗಳು
Update: 2016-07-14 23:26 IST
ಬೆಳ್ತಂಗಡಿ, ಜು.14: ಒಂದೆಡೆಯಿಂದ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನಗಳಿಗೆ ಸರಕಾರ ಹಲವಾರು ನಿಯಂತ್ರಣಾ ಕ್ರಮಗಳನ್ನು ಹೇರುತ್ತಿದೆ. ಆದರೆ, ಸರಕಾರಿ ಬಸ್‌ಗಳಲ್ಲಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಬೆಳ್ತಂಗಡಿಯಿಂದ ನೆರಿಯಕ್ಕೆ ಹೋಗುವ ಬಸ್‌ನಲ್ಲಿ ಮಕ್ಕಳು ನೇತಾಡುತ್ತಾ ಹೋಗುತ್ತಿರುವುದು ಪ್ರತಿನಿತ್ಯ ನಡೆಯುತ್ತಿದೆ. ಹೆಚ್ಚುವರಿ ಬಸ್‌ಗಳನ್ನು ಹಾಕುವಂತೆ ಜನ ಬೇಡಿಕೆಯಿಡುತ್ತಿದ್ದರೂ ಅದಕ್ಕೆ ಸರಕಾರ ಇನ್ನೂ ಸ್ಪಂದಿಸಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.