ಕೊಣಾಜೆ: ಪರಿಣಾಮಕಾರಿ ಕಲಿಕೆ ಮತ್ತು ನಿರ್ವಹಣೆ ಕಾರ್ಯಾಗಾರ
Update: 2016-07-14 23:35 IST
ಕೊಣಾಜೆ, ಜು.14: ವಿಶ್ವಮಂಗಳ ವಿದ್ಯಾಸಂಸ್ಥೆಯಲ್ಲಿ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗಾಗಿ ಪರಿಣಾಮಕಾರಿ ಕಲಿಕೆ ಮತ್ತು ನಿರ್ವಹಣೆ ಎಂಬ ವಿಷಯದ ಕುರಿತು ಕಾರ್ಯಾಗಾರವು ಬುಧವಾರ ನಡೆಯಿತು.
ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಮನಃಶಾಸ್ತ್ರಜ್ಞ ಡಾ. ಶ್ರೀನಿವಾಸ್ ಭಟ್ ಮಾಹಿತಿ ನೀಡಿ, ವಿದ್ಯಾರ್ಥಿಗಳ ಕಲಿಕೆಯು ಶುದ್ಧ ಮನಸ್ಸಿನಿಂದ, ಸ್ವತಂತ್ರವಾದ, ಸ್ವಂತ ಜವಾಬ್ದಾರಿಯಿಂದ ಕೂಡಿದ್ದಾಗಿರಬೇಕು ಎಂದು ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಅವರವರ ಅನುಕೂಲತೆಗೆ ತಕ್ಕಂತೆ ವೇಳಾ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಓದುವಂತೆ ಕಿವಿ ಮಾತು ಹೇಳಿದರು.
ಡಾ. ಅನಿಶ್ ಕುರಿಯನ್ ಮತ್ತು ಡಾ. ಅಗ್ನಿಟಾ ಐವನ್ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.