ಶಿಕ್ಷಕರ ಮರು ಹೊಂದಾಣಿಕೆಗೆ ನಾಳೆ ಕೌನ್ಸೆಲಿಂಗ್

Update: 2016-07-14 18:24 GMT

ಉಡುಪಿ, ಜು.14: ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯಂತೆ ಶಿಕ್ಷಕರ ಮರು ಹೊಂದಾಣಿಕೆ ಮಾಡಲು ಆಯುಕ್ತರು ಸೂಚಿಸಿದ್ದು, ಇದರಂತೆ ಜಿಲ್ಲೆಯಲ್ಲಿ ಗುರುತಿಸಿರುವ ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆ ಪ್ರಕ್ರಿಯೆ ಯನ್ನು ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ (ಬೋರ್ಡ್ ಹೈಸ್ಕೂಲ್ ಆವರಣ) ಇಲ್ಲಿ ಜು.16ರಂದು ಬೆಳಗ್ಗೆ 10ರಿಂದ ನಡೆಸಲಾಗುವುದು.
ಸಂಬಂಧಿಸಿದ ಶಿಕ್ಷಕರು ಬಿಇಒ ಕಚೇರಿಯಲ್ಲಿ ಪ್ರಕಟಿಸಿರುವ ಪಟ್ಟಿಯನ್ನು ನೋಡಿ ಕೌನ್ಸೆಲಿಂಗ್‌ಗೆ ಹಾಜರಾಗಬೇಕೆಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News