ಅಂಗಡಿಗೆ ನುಗ್ಗಿ ಕಳವಿಗೆ ಯತ್ನ
Update: 2016-07-14 23:55 IST
ಗಂಗೊಳ್ಳಿ, ಜು.14: ತ್ರಾಸಿ ಜಂಕ್ಷನ್ ಬಳಿಯ ವಿಶ್ವಾಸ್ ಜನರಲ್ ಸ್ಟೋರ್‌ಗೆ ಮಂಗಳವಾರ ರಾತ್ರಿ ವೇಳೆ ನುಗ್ಗಿ ಕಳವಿಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಗುಜ್ಜಾಡಿ ಗ್ರಾಮದ ಕೊಡಪಾಡಿಯ ರಾಘವೇಂದ್ರ ಎಂಬವರ ಅಂಗಡಿ ಮಾಡಿನ ತಗಡನ್ನು ಸರಿಸಿ ಒಳನುಗ್ಗಿದ ಪ್ರಸಾದ್ ಖಾರ್ವಿ ಎಂಬಾತ ಕ್ಯಾಶ್ ಕಳವು ನಡೆಸಲು ಪ್ರಯತ್ನಿಸಿರುವ ಬಗ್ಗೆ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.