×
Ad

ಒಂದು ಸೆಂಟಿ ಮೀಟರ್ ಜಾಗವನ್ನೂ ಬಿಟ್ಟುಕೊಡೆವು: ಚೀನಾ

Update: 2016-07-16 00:11 IST

ಬೀಜಿಂಗ್, ಜು. 15: ಸಾರ್ವಭೌಮತ್ವ ಎನ್ನುವುದು ಚೀನಾದ ಮೂಲಭೂತ ತತ್ವವಾಗಿದೆ ಹಾಗೂ ತಾನು ಹಕ್ಕು ಸ್ಥಾಪಿಸುತ್ತಿರುವ ಜಲಪ್ರದೇಶದ ಒಂದು ಸೆಂಟಿ ಮೀಟರ್ ಜಾಗವನ್ನೂ ಬಿಟ್ಟುಕೊಡಲಾರೆ ಎಂದು ಚೀನಾ ಶುಕ್ರವಾರ ಘೋಷಿಸಿದೆ.

ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾಕ್ಕೆ ಐತಿಹಾಸಿಕ ಹಕ್ಕಿಲ್ಲ ಎಂಬುದಾಗಿ ದ ಹೇಗ್‌ನ ಅಂತಾರಾಷ್ಟ್ರೀಯ ಪಂಚಾಯಿತಿ ನ್ಯಾಯಾಲಯ ಮಂಗಳವಾರ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಚೀನಾ ಈ ಹೇಳಿಕೆ ನೀಡಿದೆ. ‘‘ಸಾರ್ವಭೌಮತ್ವ ಚೀನಾದ ಪ್ರಾಥಮಿಕ ತತ್ವವಾಗಿದೆ’’ ಎಂದು ಚೀನಾದ ಉನ್ನತ ರಾಜತಾಂತ್ರಿಕ ಯಾಂಗ್ ಜೀಚಿ ಹೇಳಿದರು.

‘‘ಚೀನಾ ಬೃಹತ್ತಾಗಿದ್ದರೂ, ನಮ್ಮ ಪೂರ್ವಜರು ಬಿಟ್ಟು ಹೋದ ಆಸ್ತಿಯ ಒಂದು ಸೆಂಟಿ ಮಿಟರ್‌ನಷ್ಟನ್ನೂ ಬಿಟ್ಟುಕೊಡುವುದಿಲ್ಲ’’ ಎಂದು ಸ್ಟೇಟ್ ಕೌನ್ಸಿಲರ್ ಯಾಂಗ್ ಹೇಳಿದರು. ಸ್ಟೇಟ್ ಕೌನ್ಸಿಲರ್ ವಿದೇಶ ಸಚಿವರಿಗಿಂತ ಒಂದು ಹಂತ ಮೇಲಿನ ಹುದ್ದೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News