9 ಕೋಟಿ ವರ್ಷ ಹಿಂದಿನ ಡೈನೋಸಾರ್ ಪಳೆಯುಳಿಕೆ ಪತ್ತೆ
ಬ್ಯೂನಸ್ ಐರಿಸ್, ಜು. 15: ಸುಮಾರು 9 ಕೋಟಿ ವರ್ಷಗಳ ಹಿಂದೆ ಜೀವಿಸಿದ್ದ ಮಾಂಸಹಾರಿ ಡೈನೋಸಾರ್ ಒಂದರ ಪಳೆಯುಳಿಕೆಯನ್ನು ಅರ್ಜೆಂಟೀನದ ಸಂಶೋಧಕರು ಪತ್ತೆಹಚ್ಚಿದ್ದಾರೆ ಎಂದು ಮಾಧ್ಯಮ ವರದಿಯೊಂದು ಗುರುವಾರ ತಿಳಿಸಿದೆ.
ಎಂಟು ಮೀಟರ್ ಉದ್ದದ ಡೈನೋಸಾರ್ ಎರಡು ಬೆರಳುಗಳ ಸಣ್ಣ ಎರಡು ಅಡಿ ಉದ್ದದ ಮುಂಗೈಗಳನ್ನು ಹೊಂದಿತ್ತು ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ವಿಜ್ಞಾನಿಗಳು ತಿಳಿಸಿದರು.
ಈ ಸಂಶೋಧನೆಯನ್ನು ವಿಜ್ಞಾನಿಗಳು ‘ಪಿಎಲ್‌ಒಎಸ್ ಜರ್ನಲ್’ನಲ್ಲಿ ಪ್ರಕಟಿಸಿದ್ದಾರೆ.
ಈ ಡೈನೋಸಾರ್ ತೆರಪಾಡ್ಸ್ ಕುಟುಂಬಕ್ಕೆ ಸೇರಿದೆ.
ಈ ಡೈನೋಸಾರ್‌ಗೆ ‘ಗ್ವಾಲಿಚೊ ಶಿನ್ಯೆ’ ಎಂಬ ಹೆಸರಿಡಲಾಗಿದೆ. ಅರ್ಜೆಂಟೀನದ ಪಟಗೋನಿಯ ವಲಯದಲ್ಲಿರುವ ಟೆಹುಯೆಲ್ಚೆ ಸಮುದಾಯ ಪೂಜಿಸುವ ದುಷ್ಟ ಶಕ್ತಿ ಗ್ವಾಲಿಚು ಮತ್ತು ದಕ್ಷಿಣ ರಿಯೊ ನೆಗ್ರೊ ಪ್ರಾಂತದಲ್ಲಿ ಈ ಡೈನೋಸಾರನ್ನು ಮೊದಲಾಗಿ ಪತ್ತೆಹಚ್ಚಿದ ವಿಜ್ಞಾನಿ ಅಕಿಕೊ ಶಿನ್ಯ ಅವರ ಹೆಸರುಗಳನ್ನು ಜೋಡಿಸಿ ಈ ಹೆಸರನ್ನು ಸೃಷ್ಟಿಸಲಾಗಿದೆ.
ಡೈನೋಸಾರ್‌ನ ಪಳೆಯುಳಿಕೆಯನ್ನು 2007ರಲ್ಲೇ ಪತ್ತೆಹಚ್ಚಲಾಗಿತ್ತಾದರೂ ವಿಶ್ಲೇಷಣೆಯ ವೇಳೆ ಸಮಸ್ಯೆ ಎದುರಾಗಿತ್ತು.