×
Ad

ಉತ್ತರ ಕೊರಿಯ ‘ದೇಶಾಂತರಿ’ಯ ಬಂಧನ

Update: 2016-07-16 00:13 IST

ಪ್ಯಾಂಗ್‌ಯಾಂಗ್ (ಉತ್ತರ ಕೊರಿಯ), ಜು. 15: ಮಗು ಅಪಹರಣ ಪ್ರಕರಣದ ಆರೋಪಿಯಾಗಿರುವ ದೇಶಾಂತರಿಯೋರ್ವನನ್ನು ಉತ್ತರ ಕೊರಿಯ ಶುಕ್ರವಾರ ಸಾರ್ವಜನಿಕವಾಗಿ ಪ್ರದರ್ಶಿಸಿದೆ ಹಾಗೂ ಆತನಿಗೆ ಕುಮ್ಮಕ್ಕು ನೀಡಿದವರು ದಕ್ಷಿಣ ಕೊರಿಯದ ಏಜೆಂಟ್‌ಗಳು ಎಂದು ಆರೋಪಿಸಿದೆ.

ಪ್ಯಾಂಗ್‌ಯಾಂಗ್‌ನಲ್ಲಿ ನಾಟಕೀಯವಾಗಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ 53 ವರ್ಷದ ಕೊ ಹ್ಯಾನ್-ಚೊಲ್, ಇಬ್ಬರು ಅನಾಥರನ್ನು ಅಪಹರಿಸಿ ದಕ್ಷಿಣ ಕೊರಿಯಕ್ಕೆ ಸಾಗಿಸಲು ತಾನು ಪ್ರಯತ್ನಿಸಿದ್ದೆ ಎಂಬುದಾಗಿ ‘‘ತಪ್ಪೊಪ್ಪಿಕೊಂಡರು’’.

ಹ್ಯಾನ್-ಚೊಲ್ 2013ರಲ್ಲಿ ಉತ್ತರ ಕೊರಿಯದಿಂದ ತಪ್ಪಿಸಿಕೊಂಡು ದಕ್ಷಿಣ ಕೊರಿಯಕ್ಕೆ ಪಲಾಯನಗೈದಿದ್ದರು ಹಾಗೂ ಅಲ್ಲಿನ ಪೌರತ್ವವನ್ನು ಪಡೆದುಕೊಂಡಿದ್ದರು.

‘‘ಮಕ್ಕಳನ್ನು ಅಪಹರಿಸಲು ಯತ್ನಿಸುವ ಮೂಲಕ ನಾನು ಅಕ್ಷಮ್ಯ ಅಪರಾಧವನ್ನು ಮಾಡಿದ್ದೇನೆ’’ ಎಂದು ಅವರು ಅಳುತ್ತಾ ಹೇಳಿದರು.

30 ನಿಮಿಷಗಳ ಪತ್ರಿಕಾಗೋಷ್ಠಿಯಲ್ಲಿ ಕೊ ಆಗಾಗ ಅತ್ತರು ಹಾಗೂ ತನ್ನನ್ನು ‘‘ಮಾತೃಭೂಮಿಗೆ ದ್ರೋಹ ಮಾಡಿದ ದೇಶದ್ರೋಹಿ’’ ಎಂಬುದಾಗಿ ಬಣ್ಣಿಸಿದರು.

ಉತ್ತರ ಕೊರಿಯದ ಅನಾಥಾಶ್ರಮದಲ್ಲಿದ್ದ 8 ಮತ್ತು 9 ವರ್ಷದ ಇಬ್ಬರು ಬಾಲಕಿಯರನ್ನು ಕರೆದೊಯ್ಯಲು ಬರುತ್ತಿದ್ದಾಗ ಮೇ 27ರಂದು ಅವರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News