ಶಶಿ ತರೂರು ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಹೊರಟ ಸ್ವಲ್ಪ ಹೊತ್ತಿನಲ್ಲೇ ಗಯಾದಲ್ಲಿ ತುರ್ತು ಭೂಸ್ಪರ್ಶ

Update: 2016-07-16 06:26 GMT

ಗಯಾ, ಜು.16:  ಮಾಜಿ ಸಚಿವ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿದಂತೆ 134 ಜನರನ್ನು ಕೊಂಡೊಯ್ಯುತ್ತಿದ್ದ  ಏರ್ ಇಂಡಿಯಾ ವಿಮಾನ ತಾಂತ್ರಿಕ ತೊಂದರೆಯಿಂದಾಗಿ ಗಯಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. 
ಶುಕ್ರವಾರ ಸಂಜೆ 4:40 ಕ್ಕೆ ಗಯಾದಿಂದ ವಾರಣಾಸಿ ಮೂಲಕ ದಿಲ್ಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ (ಎಐ 433), ಮೇಲೆ ಹಾರಿದ ಸ್ವಲ್ಪ ಹೊತ್ತಿನಲ್ಲೇ ತುರ್ತು ಭೂಸ್ಪರ್ಶ ಮಾಡಿದ್ದು, ಲ್ಯಾಂಡಿಂಗ್ ಚಕ್ರದಲ್ಲಿ  ತೈಲ ಸೋರಿಕೆ ಕಂಡು ಬಂದಿರುವ  ಹಿನ್ನೆಲೆಯಲ್ಲಿ  ವಿಮಾನ ತರ್ತು ಭೂಸ್ಪರ್ಶ ಮಾಡಿದೆ. ತೈಲ ಸೋರಿಕೆಯಿಂದಾಗಿ ಲ್ಯಾಂಡಿಂಗ್ ಗೇರ್  ಸ್ಪಂದಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ.  ವಿಮಾನದಲ್ಲಿ 127 ಮಂದಿ ಪ್ರಯಾಣಿಕರು ಮತ್ತು ಏಳು ಸಿಬ್ಬಂದಿ  ಪ್ರಯಾಣಿಸುತ್ತಿದ್ದರು. 
127 ಪ್ರಯಾಣಿಕರಲ್ಲಿ  ಜಪಾನ್, ಶ್ರೀಲಂಕಾ ಮತ್ತು ಥಾಯ್ಲೆಂಡ್‌ ಮತ್ತಿತರ  ದೇಶಗಳ ಪ್ರಜೆಗಳು ಇದ್ದಾರೆ. ಅವರೆಲ್ಲರೂ ಬುದ್ಧ ಗಯಾದ ಹೋಟೆಲ್‌ ನಲ್ಲಿ ಉಳಿದುಕೊಂಡಿದ್ದಾರೆ  ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News