×
Ad

ರಸ್ತೆ ದುರಸ್ತಿಗೆ ಆಗ್ರಹಿಸಿ ಹೆಚ್.ಪಿ.ಸಿ.ಎಲ್ ಪಂಪ್ ಹೌಸ್ ಗೆ ಬೀಗ

Update: 2016-07-16 15:06 IST

ಬೆಳ್ತಂಗಡಿ, ಜು.16: ಕಳಿಯ ಹಾಗೂ ಹಾಗೂ ಕೊಯ್ಯೂರು ಗ್ರಾಮಗಳ ಸಂಪರ್ಕ ರಸ್ತೆಯಾಗಿರುವ ಪರಪ್ಪು-ಎರುಕಡಪ್ಪು ರಸ್ತೆಯ ಬದಿಯಲ್ಲಿ ಹೆಚ್.ಪಿ.ಸಿ.ಎಲ್ ಗ್ಯಾಸ್ ಪೈಪ್ ಲೈನ್ ಅಳವಡಿಸಲಾಗಿದೆ. ಈ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆ ದುರಸ್ತಿ ಮಾಡಿಕೊಡದ ಹೆಚ್.ಪಿ.ಸಿ.ಎಲ್ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಪಂಪ್ ಹೌಸ್ ಗೆ ಬೀಗ ಜಡಿದರು. 

ಕಂಪೆನಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿರುವ ಗ್ರಾಮಸ್ಥರು ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸದಸ್ಯರು, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ನರೇಂದ್ರ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರೂ ಕಂಪೆನಿಯ ಅಧಿಕಾರಿಗಳು ಬರದೆ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News