ಕಡಬ: ಓಮ್ನಿ, ಸ್ಕಾರ್ಪಿಯೋ ಢಿಕ್ಕಿ
Update: 2016-07-16 15:14 IST
ಕಡಬ, ಜು.15: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯಹೆದ್ದಾರಿಯ ಕಡಬ ಹೆಚ್ ಪಿ ಪೆಟ್ರೋಲ್ ಬಂಕ್ ಬಳಿ ಓಮ್ನಿ ಹಾಗೂ ಸ್ಕಾರ್ಪಿಯೋ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಶನಿವಾರ ನಡೆದಿದೆ.
ಓಮ್ನಿ ಕಾರೊಂದು ಪೆಟ್ರೋಲ್ ತುಂಬಿಸಲು ಪೆಟ್ರೋಲ್ ಪಂಪು ಹತ್ತಿರ ತಿರುಗಿಸುತ್ತಿದ್ದ ವೇಳೆ ಎದುರಿನಿಂದ ಬಂದ ಸ್ಕಾರ್ಪಿಯೋಗೆ ಓಮ್ನಿ ಢಿಕ್ಕಿ ಹೊಡೆದಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ವೆಂದು ತಿಳಿದು ಬಂದಿದೆ.