×
Ad

ಕಾಸರಗೋಡು: ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

Update: 2016-07-16 16:27 IST

ಕಾಸರಗೋಡು, ಜು.16: ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ  ನೀರ್ಚಾಲು ಮಾನ್ಯದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಯನ್ನು ಮೀಪುಗುರಿಯ  ಶಿಹಾಬ್ (18) ಎಂದು ಗುರುತಿಸಲಾಗಿದೆ.

ಮೂವರು ಸಹಪಾಠಿಗಳ ಜೊತೆಗೆ ಶಿಹಾಬ್  ಮಾನ್ಯದ ಶ೦ಶುಲ್ ನಗರದಲ್ಲಿರುವ  ಪಂಚಾಯತ್  ಕೆರೆಗೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಜೊತೆಗಿದ್ದ ಮಕ್ಕಳ ಬೊಬ್ಬೆ ಕೇಳಿ  ಧಾವಿಸಿ ಬಂದ  ಸ್ಥಳೀಯರು ಕೆರೆಯಲ್ಲಿ ಮುಳುಗಿದ್ದ  ಶಿಹಾಬ್ ನನ್ನು  ಮೇಲಕ್ಕೆತ್ತಿದರೂ  ಜೀವ ಉಳಿಸಲಾಗಲಿಲ್ಲ. 

ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ  ನಡೆಸುತ್ತಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News