ಬೈಕ್ ಸ್ಕಿಡ್ : ಕೆಎಸ್ಸಾರ್ಟಿಸಿ ಉದ್ಯೋಗಿ ಸಾವು
Update: 2016-07-17 12:41 IST
ಬೆಳ್ತಂಗಡಿ,ಜು.17: ಬೈಕ್ ಸ್ಕಿಡ್ ಆಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಧರ್ಮಸ್ಥಳ ಸಮೀಪ ಕಾಯರ್ತಡ್ಕ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಲಕ್ಷ್ಮಣ್ ಗೌಡ ಎಂದು ಗುರುತಿಸಲಾಗಿದ್ದು, ಇವರು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಉದ್ಯೋಗಿಯಾಗಿದ್ದರು.
ಈ ಸಂಬಂಧ ಥರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.