×
Ad

ಕಲಬುರಗಿ ಕಿರುಕುಳ ಪ್ರಕರಣ: ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ ಆರೋಪಿ ವಿದ್ಯಾರ್ಥಿನಿಯರು

Update: 2016-07-17 14:57 IST

   ಬೆಂಗಳೂರು,ಜುಲೈ 17:ಕರ್ನಾಟಕದ ಕಲಬುರಗಿಯ ಅಲ್‌ಕಮರ್ ನರ್ಸಿಂಗ್ ಕಾಲೇಜ್‌ನಲ್ಲಿ ಕೇರಳದ ವಿದ್ಯಾರ್ಥಿನಿಯೊಬ್ಬಳನ್ನು ಕಿರುಕುಳ ನಡೆಸಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಇಬ್ಬರು ವಿದ್ಯಾರ್ಥಿನಿಯರು ಕರ್ನಾಟಕದ ಹೈಕೋರ್ಟಿಗೆ ಜಾಮೀನು ಅರ್ಜಿಸಲ್ಲಿಸಿದ್ದಾರೆಂದು ವರದಿಯಾಗಿದೆ.

  ಕಲಬುರಗಿ ಎರಡನೆ ಅಡಿಶನಲ್ ಸೆಶನ್ಸ್ ಕೋರ್ಟು ಒಂದನೆ ಮತ್ತು ಎರಡನೆ ಆರೋಪಿಗಳಾದ ಆದಿರಾ, ಲಕ್ಷ್ಮೀ ಎಂಬವರಿಗೆ ಜಾಮೀನು ನಿರಾಕರಿಸಿ ಜುಲೈ 22ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಪ್ರಕರಣದ ಮೂರನೆ ಆರೋಪಿ ಕೃಷ್ಣಪ್ರಿಯಾಳಿಗೆ ಕೋರ್ಟು ಜಾಮೀನು ನೀಡಿತ್ತು. ಜಾಮೀನು ನಿರಾಕರಿಸಿದ ಇಬ್ಬರು ವಿದ್ಯಾರ್ಥಿನಿಯರು ಕಲಬುರಗಿ ಸೆಂಟ್ರಲ್ ಜೈಲಿನಲ್ಲಿದ್ದಾರೆ.

 ಜೈಲಿನೊಳಗಿರುವ ಆದಿರಾ, ಲಕ್ಷ್ಮೀ ಇಬ್ಬರು ಇದೀಗ ಹೈಕೋರ್ಟ್‌ನ ಕಲಬುರಗಿ ಪೀಠದ ಮುಂದೆ ಜಾಮೀನಿಗೆ ಮನವಿ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ರ್ಯಾಗಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ಆದಿರಾ, ಲಕ್ಷ್ಮೀ, ಕೃಷ್ಣಪ್ರಿಯಾರ ವಿರುದ್ಧ ಕರ್ನಾಟಕ ಪೊಲೀಸರು ಭಾರತ ದಂಡ ಸಂಹಿತೆ, 307,346 ಹಾಗೂ ಕರ್ನಾಟಕ ಶಿಕ್ಷಣ ಕಾಯಿದೆ ಖಲಂ 116 ಪ್ರಕಾರ ಕೇಸು ದಾಖಲಿಸಿದ್ದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News