×
Ad

ಫ್ರಾನ್ಸ್ ಉಗ್ರರ ದಾಳಿ: ಪ್ರವಾಸಕ್ಕೆ ತೆರಳಿದ್ದ ಪುತ್ತೂರಿನ ಕುಟುಂಬ ಸುರಕ್ಷಿತ

Update: 2016-07-17 15:09 IST

ಪುತ್ತೂರು, ಜು.17: ಫ್ರಾನ್ಸ್ ದೇಶದ ನೀಸ್ ನಗರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹಲವಾರು ಮಂದಿ ಮೃತರಾಗಿದ್ದು, ಇದೇ ಸಂದರ್ಭದಲ್ಲಿ ಫ್ರಾನ್ಸ್ ಪ್ರವಾಸಕ್ಕೆ ತೆರಳಿದ್ದ ಪುತ್ತೂರಿನ ಉದ್ಯಮಿ ಕರುಣಾಕರ ರೈ ಕುಟುಂಬ ಸೇರಿದಂತೆ ಪ್ರವಾಸ ತಂಡದ ಒಟ್ಟು 20 ಮಂದಿ ಸುರಕ್ಷಿತರಾಗಿರುವುದಾಗಿ ತಿಳಿದು ಬಂದಿದೆ. ತನ್ನ ತಂದೆ ಮತ್ತು ಪ್ರವಾಸದ ತಂಡ ಸುರಕ್ಷಿತವಾಗಿದೆ ಎಂದು ಕರುಣಾಕರ ರೈ ಅವರ ಪುತ್ರ ಅಶ್ವಿನ್ ರೈ ತಿಳಿಸಿದ್ದಾರೆ. 

ಕರುಣಾಕರ ರೈ, ಅವರ ಪತ್ನಿ ಕೃಷ್ಣವೇಣಿ ಮತ್ತು ಪುತ್ರಿ ಆಶಿಕಾ ರೈ ಅವರು ಫ್ರಾನ್ಸ್ ಪ್ರವಾಸದಲ್ಲಿದ್ದಾರೆ. 
ತನ್ನ ತಂದೆ, ತಾಯಿ, ತಂಗಿ ಮತ್ತು ತಂದೆಯ ಮಿತ್ರರು ಬೆಂಗಳೂರಿನ ಮೆಕೆಮೈಡಿಫ್ ಎಂಬ ಟೂರ್ ಪ್ಯಾಕೇಜ್ ಮೂಲಕ 12 ದಿನಗಳ ವಿದೇಶ ಪ್ರವಾಸ ಕೈಗೊಂಡಿದ್ದು, ಜು.9ರಂದು ಬೆಂಗಳೂರಿನಿಂದ ಮುಂಬೈ ಮೂಲಕ ಅಬುದಾಬಿ, ಯುರೋಪ್ ಗೆ ತೆರಳಿದ್ದರು. ಜು.14ರಂದು ಫ್ರಾನ್ಸ್ ದೇಶದ ನೀಸ್ ಗೆ ಮದ್ಯಾಹ್ನ ತಲುಪಿದ್ದರು. ಅಲ್ಲಿ ರಾತ್ರಿಯ ವೇಳೆಯಲ್ಲಿ ಅಲ್ಲಿಯ ಹಬ್ಬದ ಸಂಭ್ರಮ ವೀಕ್ಷಣೆ ಮಾಡುವ ನಡುವೆ ಸ್ಥಳೀಯ ಹೋಟೆಲ್ ಡಿನ್ನರ್ ಗೆ ತೆರಳಿದ್ದರು. ಇದೇ ರಾತ್ರಿ ಘಟನೆ ಸಂಭವಿಸಿದೆ. ಆದರೆ ತನ್ನ ತಂದೆ, ತಾಯಿ ಮತ್ತು ತಂಗಿ ಮತ್ತು ಪ್ರವಾಸದ ತಂಡ ಹೊಟೇಲ್ ನ ಒಳಗಡೆ ಇದ್ದ ಕಾರಣ ಎಲ್ಲರೂ ಸುರಕ್ಷಿತರಾಗಿರುವುದಾಗಿ ತಂದೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ ಎಂದು ಆಶ್ವಿನ್ ರೈ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News