×
Ad

ನರಿಂಗಾನ ಚರ್ಚ್‌ನಲ್ಲಿ ವನಮಹೋತ್ಸವ ಕಾರ್ಯಕ್ರಮ

Update: 2016-07-17 17:14 IST

ಕೊಣಾಜೆ, ಜು.17: ಬೇಸಿಗೆಯಲ್ಲಿ ಬಹಳಷ್ಟು ನೀರಿನ ಬರ ಎದುರಾಗುತ್ತಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ಮಳೆಗಾಲದಲ್ಲಿ ಆದಷ್ಟು ನೀರು ಇಂಗಿಸಬೇಕು ಎಂದು ಜಿ.ಪಂ ಸದಸ್ಯೆ ಮಮತಾ ಗಟ್ಟಿ ಹೇಳಿದ್ದಾರೆ.

ಅವರು ನರಿಂಗಾನ ಗ್ರಾಮದ ಬೋಳ ಸಂತ ಲಾರೆನ್ಸ್ ಚರ್ಚ್ ವಠಾರದಲ್ಲಿ ರವಿವಾರ ನಡೆದ ವನಮಹೊತ್ಸವ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬೋಳ ಪ್ರದೇಶದಲ್ಲಿ ಕೆರೆಗಳಿದ್ದರೆ ಅದರ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಪ್ರಥಮ ಆದ್ಯತೆ ನೀಡಲಾಗುವುದು. ಅಲ್ಪಸಂಖ್ಯಾತ ನಿಗಮದ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಚರ್ಚ್‌ಗಳಲ್ಲಿ ನಡೆಸಬೇಕು ಎಂದು ಹೇಳಿದರು.

ಜನ ಶಿಕ್ಷಣ ಟ್ರಸ್ಟ್‌ನ ಶ್ರೀನಿವಾಸ್ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಮಾಹಿತಿ ನೀಡಿದರು.

ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯೀಲ್ ಮೀನಕೋಡಿ, ಉಪಾಧ್ಯಕ್ಷ ನಳಿನಾಕ್ಷಿ, ಅಭಿವೃದ್ಧಿ ಅಧಿಕಾರಿ ನಳಿನಿ, ಸದಸ್ಯರಾದ ಮುರಳೀಧರ್ ಶೆಟ್ಟಿ ಮೊರ್ಲ, ಜೋತಿ ಡಿಸೋಜ, ಅಬ್ದುಲ್ಲತೀಫ್, ಮಾಜಿ ಸದಸ್ಯರಾದ ಜೋಸೆಫ್, ಶೇಕಬ್ಬ, ಸಂತ ಲಾರೆನ್ಸ್ ಚರ್ಚ್‌ನ ಉಪಾಧ್ಯಕ್ಷ ರಿಚರ್ಡ್ ಡಿಸೋಜ, ಪತ್ರಕರ್ತ ಗುರುವಪ್ಪಬಾಳೆಪುಣಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

ಸಂತ ಲಾರೆನ್ಸ್ ಚರ್ಚ್‌ನ ಕಾರ್ಯದರ್ಶಿ ವಿಕ್ಟರ್ ಡಿಸೋಜ ಸ್ವಾಗತಿಸಿದರು. ಚರ್ಚ್‌ನ ಧರ್ಮಗುರು ಮೈಕಲ್ ಡಿಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News