ಭಾರತ-ಪಾಕಿಸ್ತಾನ ಗಡಿಯಲ್ಲಿ ಭೂಕಂಪನ

Update: 2016-07-17 13:33 GMT

ಹೊಸದಿಲ್ಲಿ, ಜು.17: ಪಂಜಾಬ್ ಸಮೀಪದ ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ 4.6ರಷ್ಟು ಪ್ರಮಾಣದ ಭೂಕಂಪನವಾಗಿದ್ದು, ರವಿವಾರ ಸಂಜೆ ಅಮೃತಸರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಭೂಕಂಪನದ ಅನುಭವವಾಗಿದೆ.

ಕೆಲವು ಮಾಧ್ಯಮಗಳ ವರದಿ ಪ್ರಕಾರ ಪಂಜಾಬ್‌ನ ಇತರ ನಗರಗಳಲ್ಲೂ ಭೂಕಂಪನ ಸಂಭವಿಸಿದೆ.

ಸಂಜೆ 5.24ರ ಸುಮಾರಿಗೆ ಸಂಭವಿಸಿದ ಭೂಕಂಪನದ ಕೇಂದ್ರಬಿಂದು ಭೂಮಿಯಿಂದ 15 ಕಿ.ಮೀ. ಆಳದಲ್ಲಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಲಾಹೋರ್, ಶೇಖ್‌ಪುರ ಹಾಗೂ ಪಾಕಿಸ್ತಾನದ ಇತರ ಕಡೆಗಳಲ್ಲೂ ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.

.......

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News