ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ವಿದೇಶಿ ಭಾಷೆಗಳಲ್ಲಿ ಡಿಪ್ಲೊಮಾ/ ಸರ್ಟಿಫಿಕೇಟ್ ಕೋರ್ಸ್

Update: 2016-07-17 16:25 GMT

ಮಂಗಳೂರು, ಜುಲೈ 17: ಮಂಗಳೂರು ವಿಶ್ವದ್ಯಾನಿಲಯದ ಅಧೀನದಲ್ಲಿರುವ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜನಲ್ಲಿ ಪ್ರಸಕ್ತ ಶೈಕ್ಷಣಿಕ 2016-17ರಿಂದ ಸಂಜೆ 6 ರಿಂದ 8ಗಂಟೆಯ ವರೆಗೆ ಪ್ರಥಮ ಹಂತದ ಜರ್ಮನ್ ಹಾಗೂ ಫ್ರೆಂಚ್ ಭಾಷೆಗಳಲ್ಲಿ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ.

ಜುಲೈ 18ರಂದು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಲವು ಸ್ನಾತಕೋತ್ತರ ಕೋರ್ಸ್‌ಗಳ ಪರಿಚಯದೊಂದಿಗೆ ಜರ್ಮನ್ ಹಾಗೂ ಫ್ರೆಂಚ್ ಭಾಷೆಗಳ ಡಿಪ್ಲೊಮಾ ಕೋರ್ಸ್‌ಗಳಿಗೆ ಸಂಬಂಧಿಸಿ ಮಾಹಿತಿ ಹಾಗೂ ಅರ್ಜಿ ಫಾರಂಗಳನ್ನು ನೀಡಲಾಗುವುದು.

ಈ ಕೋರ್ಸ್‌ಗಳನ್ನು ಹೊಂದಿರುವ ಪದವೀಧರರಿಗೆ ಬಹುರಾಷ್ಟ್ರೀಯ PR/HR Agencies, Event Management Companies, Tuorism, Coorporate IT  ಹಾಗೂ ಇತರ ಕಂಪೆನಿಗಳಲ್ಲಿ ವಿಪುಲ ಅವಕಾಶಗಳಿರುವುದರಿಂದ ಮಂಗಳೂರು ನಗರದ ಸುತ್ತಮುತ್ತಲಿನ ಇಂಜಿನಿಯರಿಂಗ್, ಬಿ.ಕಾಂ., ಬಿ.ಎ., ಬಿಎಡ್, ಎಂಬಿಎ, ಸಿಎ, ಎಂಎ, ಎಂಎಡ್ ಪದವಿ ಓದುತ್ತಿರುವ ವಿದ್ಯಾರ್ಥಿಗಳು, ವ್ಯವಹಾರ/ವ್ಯಾಪಾರ ಅಥವಾ ಕಾರ್ಪೊರೇಟ್/ಮಾರ್ಕೆಟಿಂಗ್ ಉದ್ಯಮದಲ್ಲಿ ತೊಡಗಿಕೊಂಡಿರುವವರು ಸಂಜೆ ತರಗತಿಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 23 ಆಗಿದೆ. ವಿವರಗಳಿಗಾಗಿ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ದೂರವಾಣಿ ಸಂಖ್ಯೆ 0824-2424608/ 9449333919ರಲ್ಲಿ ಮಾಹಿತಿಯನ್ನು ಪಡೆಯಬಹುದು ಎಂದು ಪ್ರಾಂಶುಪಾಲರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News