×
Ad

ಕುಂದಾಪುರ: ನುಸ್ರತುಲ್ ಮಸಾಕೀನ್ ವತಿಯಿಂದ ಗಲ್ಫ್ ಮೀಟ್

Update: 2016-07-17 23:26 IST

ಕುಂದಾಪುರ, ಜು.17: ತಾಲೂಕಿನ ನುಸ್ರತುಲ್ ಮಸಾಕೀನ್ ವತಿಯಿಂದ ಗಲ್ಫ್ ಮೀಟ್ ಕಾರ್ಯಕ್ರಮವು ಎನ್‌ಎಂಎ ಕಟ್ಟಡದಲ್ಲಿ ನಡೆಯಿತು.

ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಎನ್‌ಎಂಎ ಕೇಂದ್ರ ಸಮಿತಿ ಅಧ್ಯಕ್ಷ ತಾಹೀರ್ ಹಸನ್ ಮಾತನಾಡಿ, ಸಂಸ್ಥೆಯ ಮೂಲಕ ಆಗಬೇಕಾದ ಕಾರ್ಯಕ್ರಮಗಳ ಕುರಿತು ವಿವರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಂದಾಪುರ ಪ್ಲಸಂಟ್‌ನ ಮಾಲಕ ಇಬ್ರಾಹೀಂ ಕೋಟ ಮಾತನಾಡಿ ಎನ್‌ಎಂಎ ನಡೆದು ಬಂದ ದಾರಿ ಹಾಗೂ ನಡೆಸುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎನ್‌ಎಂಎ ಕುಂದಾಪುರ ವಲಯದ ಅಧ್ಯಕ್ಷ ಸರ್ದಾರ್ ಗುಲ್ವಾಡಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ತಬ್ರೇಝ್ ದುಬೈ, ಸಲೀಂ, ಅಬ್ದುಸ್ಸಲಾಂ ಬಹ್ರೈನ್, ಇಫ್ತಿಕಾರ್ ಜುಬೈಲ್, ಅಬ್ದುರ್ರಹ್ಮಾನ್, ಉಬೈದ್ ದಮ್ಮಾಮ್, ಉಮರ್ ಜಿದ್ದಾ, ಜಾವೇದ್ ಸೌತ್ ಆಫ್ರಿಕಾ, ಹಾಗೂ ಕುಂಞಿಮೋನು, ಶೇಖ್ ಅಬು ಮುಹಮ್ಮದ್, ಅಬ್ದುಲ್ಲಾ ಕೋಟೆ, ಇಕ್ಬಾಲ್, ಮುಹಮ್ಮದ್ ಗೌಸ್ ಶಾಬಾನ್ ಹಂಗಳೂರು ಮತ್ತಿತರರು ಉಪಸ್ಥಿತರಿದ್ದರು.

ಅಲ್ತಾಫ್ ಕುರೈಶಿ ಕಾರ್ಯಕ್ರಮ ನಿರೂಪಿಸಿದರು. ಯೂಸುಫ್ ಮೋನು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News