ಸ್ಪಂದನ ಟಿ.ವಿ.ಯ ನೂತನ ಪ್ರಸಾರ ಕೇಂದ್ರ ಉದ್ಘಾಟನೆ
ಮಂಗಳೂರು, ಜು.17: ಕೂಳೂರಿನ ಫಿಯೆಟ್ ಶೋರೂಂನ ಎರಡನೆ ಮಹಡಿಯಲ್ಲಿ ಆರಂಭಗೊಂಡ ಸ್ಪಂದನ ಟಿ.ವಿ.ಯ ಮಂಗಳೂರಿನ ನೂತನ ಪ್ರಸಾರ ಕೇಂದ್ರವನ್ನು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಉದ್ಘಾಟಿಸಿದರು.
ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕ ಕಲ್ಲಡ್ಕ ಪ್ರಭಾಕರ್ ಭಟ್ ದೀಪ ಬೆಳಗಿಸಿ ಶುಭಹಾರೈಸಿದರು. ದ.ಕ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಸ್ಪಂದನ ಮೊಬೈಲ್ ಆ್ಯಪ್ ಲೋಕಾರ್ಪಣೆ ಮಾಡಿದರು.
ಸಚಿವ ಯು.ಟಿ ಖಾದರ್ ಕ್ಯಾಮರಾ ಕ್ಲಿಕ್ಕಿಸುವ ಮೂಲಕ ಮಂಗಳೂರು ವಿಭಾಗ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತನ ಮುಖ್ಯ ಸಚೇತಕ ಐವನ್ ಡಿಸೋಜ , ಶಾಸಕ ಜೆ.ಆರ್ ಲೋಬೊ, ಶಾಸಕ ಮೊಯ್ದಿನ್ ಬಾವ, ಕ್ಯಾ.ಗಣೇಶ್ ಕಾರ್ಣಿಕ್, ಮಾಜಿ ಶಾಸಕ ಯೋಗೀಶ್ ಭಟ್, ಹ್ಯಾಂಗ್ಯೊ ಐಸ್ಕ್ರೀಂನ ಮಾಲಕ ಪ್ರದೀಪ್ ಪೈ, ಕರ್ನಾಟಕ ಬ್ಯಾಂಕ್ನ ಪಿಆರ್ಒ ಶ್ರೀನಿವಾಸ್ ದೇಶಪಾಂಡೆ, ಮಂಗಳೂರು ಚೇಬರ್ ಆಫ್ ಕಾಮಸ್‌ನ ಮಾರೂರು ರಾಮ್ ಮೋಹನ್ ಪೈ, ಸ್ಪಂದನ ವಾಹಿನಿಯ ಆಡಳಿತ ನಿರ್ದೇಶಕ ಪಿ.ವಿಲಾಸ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.