ತುಳಿತಕ್ಕೆ ಒಳಗಾದವರ ಸಂಘಟಿತ ಧ್ವನಿಗೆ ಮೌಲ್ಯ ಹೆಚ್ಚಿದೆ

Update: 2016-07-17 18:34 GMT

ಪುತ್ತೂರು, ಜು.17: ತಲೆ ತಲಾಂತರದಿಂದ ತುಳಿತಕ್ಕೆ ಒಳಗಾದ ಮಂದಿ ಸಂಘಟಿತರಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವುದು ಉತ್ತಮ ವಿಚಾರವಾಗಿದ್ದು, ತುಳಿತಕ್ಕೆ ಒಳಗಾದವರ ಸಂಘಟಿತ ಧ್ವನಿಗೆ ಮೌಲ್ಯ ಹೆಚ್ಚಿದೆ ಎಂದು ಪತ್ರಕರ್ತ ಸಂಶುದ್ದೀನ್ ಸಂಪ್ಯ ಹೇಳಿದರು.

ಅವರು ರವಿವಾರ ಪುತ್ತೂರಿನ ಸಾಲ್ಮರದ ಸ್ಕೋಪ್ ಕೌನ್ಸಿಲಿಂಗ್ ಸೆಂಟರ್ ವತಿಯಿಂದ ಗುಂಪಕಲ್ಲು ಆದಿದ್ರಾವಿಡ ಸಮಾಜ ಸೇವಾ ಸಂಘದ ಸದಸ್ಯರಿಗೆ ನಡೆದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಯಲ್ಲಿಯೂ ಆತನ ಸಾಧನೆ ಪಾತ್ರ ಮಹತ್ತರವಾಗಿದ್ದು, ಅಂಜಿಕೆ, ಅಧೈರ್ಯ ಕೀಳರಿಮೆಯಿಂದ ನಮ್ಮ ಬೆಲೆ ಮತ್ತು ಬಲ ನಮಗೆ ತಿಳಿಯದೆ ವಂಚಿತರಾಗುತ್ತೇವೆ. ಸಂಘಟನೆಯ ಮೂಲಕ ಇವೆಲ್ಲವನ್ನೂ ಮೀರಿ ಬದುಕಲು ಸಾಧ್ಯವಿದೆ ಎಂದರು.

‘ಸಂವಹನೆ ಮತ್ತು ವ್ಯಕ್ತಿತ್ವ ವಿಕಾಸ’ ಎಂಬ ವಿಷಯದ ಬಗ್ಗೆ ಸಾಲ್ಮರ ಸ್ಕೋಪ್ ಕೌನ್ಸಿಲ್‌ನ ಆಪ್ತ ಸಲಹೆಗಾರ ಗಂಗಾಧರ ಬೆಳ್ಳಾರೆ ಅವರು ತರಬೇತಿ ನೀಡಿದರು.

ಈ ಸಂದರ್ದಲ್ಲಿ ಅವರು ಸಮಯ ಪರಿಪಾಲನೆ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ವಿಚಾರದ ಕುರಿತು ಉದಾಹರಣೆ ಸಹಿತ ಮಾಹಿತಿ ನೀಡಿದರು. ಗುಂಪಕಲ್ಲು ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು.

ಸದಸ್ಯ ಪದ್ಮನಾ ಸ್ವಾಗತಿಸಿದರು. ಪೂರ್ವಾಧ್ಯಕ್ಷ ಜಿನ್ನಪ್ಪ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News