ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಭಾರತದ ಸ್ಪಿನ್ನರ್‌ಗಳು
ಸೈಂಟ್‌ಕಿಟ್ಸ್, ಜು.17: ಸೈಂಟ್‌ಕಿಟ್ಸ್‌ನ ವಾತಾವರಣ ಭಾರತದಂತಿದ್ದು, ಇಲ್ಲಿನ ಪಿಚ್ ಸ್ಪಿನ್ನರ್‌ಗಳಿಗೆ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಮೂವರು ಸ್ಪಿನ್ನರ್‌ಗಳು ಎರಡು ಅಭ್ಯಾಸ ಪಂದ್ಯಗಳಲ್ಲಿ ಮಿಂಚಿದ್ದಾರೆ.
ಶನಿವಾರ ಇಲ್ಲಿ ಕೊನೆಗೊಂಡ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ಗಳು ಒಟ್ಟು 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಎರಡೂ ಇನಿಂಗ್ಸ್‌ಗಳಲ್ಲಿ ಅಶ್ವಿನ್ ತಲಾ 3 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ಜಡೇಜ, ಅಶ್ವಿನ್ ಹಾಗೂ ಮಿಶ್ರಾ ಭಾರತದ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸುವ ನಿರೀಕ್ಷೆಯಿದೆ. ಈ ಮೂವರು ಪಿಚ್‌ನ ಲಾಭ ಪಡೆದಿದ್ದಲ್ಲದೆ, ಕೋಚ್ ಅನಿಲ್ ಕುಂಬ್ಳೆ ಸಲಹೆಯೂ ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಿದ್ದಾರೆ.
‘‘ಅವರು(ಅನಿಲ್‌ಕುಂಬ್ಳೆ) ತಮ್ಮ ಅನುಭವವನ್ನು ನಮ್ಮೆಂದಿಗೆ ಹಂಚಿಕೊಂಡಿದ್ದಾರೆ. ಟೆಸ್ಟ್ ಹಾಗು ಏಕದಿನ ಪಂದ್ಯಗಳೆರಡರಲ್ಲೂ ಉತ್ತಮ ಪ್ರದರ್ಶನ ನೀಡಿರುವ ಕಾರಣ ಅವರು ಭಾರತದ ಶ್ರೇಷ್ಠ ಬೌಲರ್ ಆಗಿದ್ದಾರೆ.ನಾವು ಡ್ರೆಸ್ಸಿಂಗ್ ರೂಮ್‌ನಲ್ಲಿ ಅವರೊಂದಿಗೆ ಮಾತನಾಡುವಾಗ ಅವರು ತಮ್ಮ ಅನುಭವವನ್ನು ಹೇಳಿಕೊಳ್ಳುತ್ತಿದ್ದರು. ಅಶ್ವಿನ್ ಕೂಡ ನನಗೆ ಸಲಹೆ ನೀಡಿದ್ದಾರೆ’’ ಎಂದು ಜಡೇಜ ಹೇಳಿದ್ದಾರೆ.
ಎರಡು ಅಭ್ಯಾಸ ಪಂದ್ಯಗಳನ್ನು ಆಡಿರುವ ಭಾರತ ಟೆಸ್ಟ್ ಸರಣಿಗೆ ಉತ್ತಮ ತಯಾರಿಯನ್ನೇ ಮಾಡಿಕೊಂಡಿದೆ. ಅಭ್ಯಾಸ ಪಂದ್ಯಗಳಲ್ಲಿ 16 ವಿಕೆಟ್‌ಗಳ ಪೈಕಿ 12 ವಿಕೆಟ್ ಸ್ಪಿನ್ನರ್‌ಗಳ ಪಾಲಾಗಿದೆ. ವಿಂಡೀಸ್ ಪಿಚ್‌ನಲ್ಲಿ ಭಾರತದ ವೇಗದ ಬೌಲರ್‌ಗಳು ಇನ್ನಷ್ಟೇ ತನ್ನ ಸಾಮರ್ಥ್ಯ ಸಾಬೀತುಪಡಿಸಬೇಕಾಗಿದೆ.
ಕೆರಿಬಿಯನ್ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕಾದರೆ 20 ವಿಕೆಟ್‌ಗಳನ್ನು ಉರುಳಿಸಬೇಕು. ವಿರಾಟ್‌ಕೊಹ್ಲಿ ನೇತೃತ್ವದ ಭಾರತ ತಂಡ ನಾವು ತಂಡ ಸ್ವದೇಶದಲ್ಲಿ ಮಾತ್ರವಲ್ಲ ವಿದೇಶಿ ವಾತಾವರಣದಲ್ಲೂ ಕಠಿಣ ಸ್ಪರ್ಧೆ ನೀಡಲಿದ್ದೇವೆಂದು ತೋರಿಸಿಕೊಡುವ ಬಯಕೆಯಲ್ಲಿದೆ.