×
Ad

ಪ್ರೊಕಬಡ್ಡಿ: ಜೈಪುರ, ಪಾಟ್ನಾ ಜಯಭೇರಿ

Update: 2016-07-18 00:09 IST

ಕೋಲ್ಕತಾ, ಜು.17: ಪ್ರೊ ಕಬಡ್ಡಿಲೀಗ್‌ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ಹಾಗೂ ಪಾಟ್ನಾ ಪೈರೆಟ್ಸ್ ತಂಡಗಳು ಜಯಶಾಲಿಯಾಗಿವೆ.

ರವಿವಾರ ಇಲ್ಲಿ ನಡೆದ ಲೀಗ್‌ನ 38ನೆ ಪಂದ್ಯದಲ್ಲಿ ಜೈಪುರ ತಂಡ ಪುಣೇರಿ ಪಲ್ಟನ್ ತಂಡವನ್ನು 33-27 ಅಂತರದಿಂದ ಸೋಲಿಸಿದರು.

ಲೀಗ್‌ನ 39ನೆ ಪಂದ್ಯದಲ್ಲಿ ಪಾಟ್ನಾ ತಂಡ ಬಂಗಾಳ ವಾರಿಯರ್ಸ್‌ ತಂಡವನ್ನು 33-27 ಅಂಕಗಳ ಅಂತರದಿಂದ ಮಣಿಸಿತು. ಆತಿಥೇಯ ಬಂಗಾಳದ ವಿರುದ್ಧ 6 ಅಂಕಗಳ ಜಯ ಸಾಧಿಸಿರುವ ಪಾಟ್ನಾ ತಂಡ 10ನೆ ಪಂದ್ಯದಲ್ಲಿ 8ನೆ ಜಯ ಸಾಧಿಸಿ ಒಟ್ಟು 41 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ.

ಪುಣೇರಿ ತಂಡವನ್ನು 6 ಅಂಕಗಳಿಂದ ಸೋಲಿಸಿರುವ ಜೈಪುರ 11ನೆ ಪಂದ್ಯದಲ್ಲಿ 6ನೆ ಜಯ ದಾಖಲಿಸಿ ಒಟ್ಟು 37 ಅಂಕ ಗಳಿಸಿ ಎರಡನೆ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News