×
Ad

ಲೆಟನ್ ಹೆವಿಟ್ ರಿಯೋ ಗೇಮ್ಸ್‌ನಿಂದ ದೂರ

Update: 2016-07-18 00:10 IST

ಸಿಡ್ನಿ, ಜು.17: ರಿಯೋ ಡಿಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೇಮ್ಸ್‌ನಿಂದ ಟೆನಿಸ್ ಕೋಚ್ ಲೆಟನ್ ಹೆವಿಟ್ ಹಾಗೂ ರೋಡ್ ಸೈಕಲಿಸ್ಟ್ ಸೈಮನ್ ಗೆರ್ರಾನ್ಸ್ ಆಸ್ಟ್ರೇಲಿಯ ತಂಡದಿಂದ ಹೊರಗುಳಿದಿದ್ದಾರೆ.

ಟೂರ್ ಡಿ ಫ್ರಾನ್ಸ್ ಸ್ಪರ್ಧೆಯ ವೇಳೆ ಗಾಯಮಾಡಿಕೊಂಡಿದ್ದ ಸೈಮನ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಕಾರಣ ಗೇಮ್ಸ್‌ನಿಂದ ಹೊರಗುಳಿಯಲು ಬಯಸಿದ್ದಾರೆ.

36ರ ಹರೆಯದ ಸೈಮನ್ ರಿಯೋದಲ್ಲಿ ಆಸ್ಟ್ರೇಲಿಯದ ಪುರುಷರ ರೋಡ್‌ರೇಸ್ ತಂಡದಲ್ಲಿ ಪ್ರಮುಖ ಸ್ಪರ್ಧಿಯಾಗಿದ್ದರು.

ಎರಡು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಹಾಗೂ ಮಾಜಿ ನಂ.1 ಆಟಗಾರ ಹೆವಿಟ್ ವೈಯಕ್ತಿಕ ಕಾರಣ ನೀಡಿ ಆಸ್ಟ್ರೇಲಿಯದ ಪುರುಷರ ಟೆನಿಸ್ ತಂಡದ ಕೋಚ್ ಹುದ್ದೆಯಿಂದ ಹಿಂದೆ ಸರಿದಿದ್ದಾರೆ.

 ಹೆವಿಟ್ ಬದಲಿಗೆ ಮಾರ್ಕ್ ಡ್ರಾಪರ್‌ರನ್ನು ಸೇರಿಸಿಕೊಳ್ಳಲು ಅನುಮತಿ ನೀಡುವಂತೆ ಟೆನಿಸ್ ಆಸ್ಟ್ರೇಲಿಯವು ಆಸ್ಟ್ರೇಲಿಯನ್ ಒಲಿಂಪಿಕ್ ಸಮಿತಿಗೆ ಮನವಿ ಸಲ್ಲಿಸಿದೆ.

ಆಸ್ಟ್ರೇಲಿಯದ ಅಗ್ರ ಪುರುಷ ಆಟಗಾರರಾದ ನಿಕ್ ಕಿರ್ಗಿಯೊಸ್ ಹಾಗೂ ಬೆರ್ನಾರ್ಡ್ ಟಾಮಿಕ್ ಕೂಡ ಒಲಿಂಪಿಕ್ ಗೇಮ್ಸ್‌ಗೆ ಲಭ್ಯವಿರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News