ಮೂಡುಬಿದಿರೆ: ವೃದ್ಧ ಆತ್ಮಹತ್ಯೆ
Update: 2016-07-18 00:22 IST
ಮೂಡುಬಿದಿರೆ, ಜು.17: ವೃದ್ಧರೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದಿರೆ ಸಮೀಪದ ಕರಿಂಜೆಯಲ್ಲಿ ರವಿವಾರ ಬೆಳಕಿಗೆ ಬಂದಿದೆ. ಕಲ್ಲಬೆಟ್ಟು- ಕರಿಂಜೆ ಗ್ರಾಮದ ಭಂಡಾರಿಬೆಟ್ಟುವಿನ ನಿವಾಸಿ ಫೆಡ್ರಿಕ್ ಪಿಂಟೊ (65) ಆತ್ಯಹತ್ಯೆ ಮಾಡಿಕೊಂಡವರು. ಒಂದು ವಾರದ ಹಿಂದೆ ಮನೆಯಿಂದ ಹೋಗಿದ್ದ ಫೆಡ್ರಿಕ್ ಹಿಂದಿರುಗಿ ಬಂದಿರಲಿಲ್ಲ. ಇಂದು ಮನೆ ಸಮೀಪದ ದರ್ಖಾಸ್‌ನಲ್ಲಿ ಫೆಡ್ರಿಕ್‌ರ ಮೃತದೇಹ ಕೊಳೆತ ಸ್ಥಿಯಲ್ಲಿ ಪತ್ತೆಯಾಗಿದ್ದು, ಕೈಯಲ್ಲಿ ವಿಷದ ಬಾಟಲಿ ಇದ್ದುದರಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.