×
Ad

ಅಲಿಗಢ ವಿವಿ ಉಪಕುಲಪತಿ ಮತ್ತು ಬಿಜೆಪಿ ಸಂಸತ್ ಸದಸ್ಯರ ನಡುವೆ ಪತ್ರ ಸಮರ!

Update: 2016-07-18 10:11 IST

ಲಕ್ನೊ, ಜುಲೈ 18: ತನ್ನನ್ನು ಧಾರ್ಮಿಕ ಮೂಲಭೂತವಾದಿಯೆಂದು ಚಿತ್ರೀಕರಿಸಿ ಜಾತ್ಯತೀತತೆಯನ್ನು ಸವಾಲೆಸಯದಿರಿ ಹಾಗೂ ನಗರದಲ್ಲಿ ಶಾಂತಿ ಕಾಪಾಡಲು ಸಹಕರಿಸಿರಿ ಎಂದು ಬಿಜೆಪಿ ಸಂಸತ್ಸದಸ್ಯರೊಬ್ಬರು ಬರೆದ ಪತ್ರಕ್ಕೆ ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದ ಉಪಕುಲಪತಿ ಲೆ.ಜನರಲ್(ನಿವೃತ್ತ) ನಸೀಮುದ್ದೀನ್ ಶಾ ಉತ್ತರ ನೀಡಿದ್ದಾರೆಂದು ವರದಿಯಾಗಿದೆ.

 ಅಲಿಗಡ ಮುಸ್ಲಿಮ್ ವಿಶ್ವಸಂಸ್ಥೆಯ ಅಲ್ಪಸಂಖ್ಯಾತ ಪದವಿ ನಷ್ಟವಾದರೆ ಅದರಿಂದಾಗಿ ಸಮಸ್ಯೆ ಸೃಷ್ಟಿಯಾಗಲಿದೆಯೆಂದು ಹೇಳಿಕೆ ನೀಡಿ ತಾವು ವಿದ್ಯಾರ್ಥಿಗಳ ನಡುವೆ ಸಮಸ್ಯೆ ಸೃಷ್ಟಿಸುತ್ತಿದ್ದೀರಿ ಎಂದು ಆರೋಪಿಸಿ ಉಪಕುಲಪತಿ ಗೆ ಬಿಜೆಪಿ ಸಂಸತ್ಸದಸ್ಯ ಸತೀಶ್ ಗೌತಂ ಪತ್ರ ಬರೆದಿದ್ದರು. ಉಪಕುಲಪತಿ ಭಾರತದ ಸಂವಿಧಾನವನ್ನು ಗೌರವಿಸುತ್ತಿಲ್ಲ ಎಂದು ಗೌತಂ ಈ ಪತ್ರದಲ್ಲಿ ಆರೋಪಿಸಿದ್ದರು.

 ಇತ್ತೀಚೆಗೆ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಅಕ್ರಮ ಪ್ರತಿಭಟನೆಗಳುನಡೆದಾಗಲೂ ದೇಶದ ಶಾಂತಿ ಮತ್ತು ಜಾತ್ಯತೀತತೆಗೆ ಅಪಾಯವೊದಗುವಂತಹ ಯಾವುದೂ ಅಲಿಗಡದ ವಿದ್ಯಾರ್ಥಿಗಳಿಂದ ಸಂಭವಿಸಿಲ್ಲ. ಆದ್ದರಿಂದ ಅಲಿಗಡ ವಿಶ್ವವಿದ್ಯಾನಿಲಯವನ್ನು ಸಂತ್ಸದಸ್ಯರು ಅಭಿನಂದಿಸಬೇಕಾಗಿದೆ ಎಂದು ಉಪಕುಲಪತಿ ಹೇಳಿದ್ದಾರೆಂದು ತಿಳಿದು ಬಂದಿದೆ. ತನ್ನ ಹೇಳಿಕೆಯಲ್ಲಿ ಶಂಕೆಯೇನಿದ್ದರೂ ನೇರವಾಗಿ ನನ್ನಲ್ಲಿ ಆ ಕುರಿತು ಕೇಳಬಹುದಾಗಿತ್ತು. ಪತ್ರ ಬರೆದು ತಾನು ಅದನ್ನು ಓದುವ ಮೊದಲೇ ಪತ್ರಿಕೆಗೆ ನೀಡಿ ಪ್ರಕಟವಾಗುವಂತೆ ಸಂಸದರು ಮಾಡಬೇಕಿತ್ತೇ ಎಂದು ಉಪಕುಲಪತಿ ಪ್ರಶ್ನಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News