×
Ad

ಪಾಕ್ ಆಟಗಾರರಿಂದ ವಿಶಿಷ್ಟ ಸಂಭ್ರಮಾಚರಣೆ

Update: 2016-07-18 10:21 IST

ಲಂಡನ್, ಜು.18: ಪಾಕಿಸ್ತಾನ ತಂಡ ನಾಯಕ ಮಿಸ್ಬಾವುಲ್ ಹಕ್ ಮೊದಲ ಇನಿಂಗ್ಸ್‌ನಲ್ಲಿ ಬಾರಿಸಿದ ಶತಕ ಹಾಗೂ ಸ್ಪಿನ್ನರ್ ಯಾಸಿರ್ ಷಾರ ಅಮೋಘ ಬೌಲಿಂಗ್ ನೆರವಿನಿಂದ ರವಿವಾರ ಇಂಗ್ಲೆಂಡ್ ತಂಡವನ್ನು ಮೊದಲ ಟೆಸ್ಟ್ ಪಂದ್ಯದಲ್ಲಿ 75 ರನ್‌ಗಳ ಅಂತರದಿಂದ ಮಣಿಸಿತ್ತು.

ಲಾರ್ಡ್ಸ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಪಾಕ್ ತಂಡದ ಕೆಲವು ಆಟಗಾರರು ಮೈದಾನದಲ್ಲಿ ನಿರಂತರವಾಗಿ ಪುಶ್‌ಅಪ್ ನಡೆಸುವ ಮೂಲಕ ವಿಶಿಷ್ಟವಾಗಿ ಸಂಭ್ರಮಾಚರಣೆ ಮಾಡಿದರು.

ಮಿಸ್ಬಾವುಲ್ ಹಕ್ ಪಡೆ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳುವ ಮೊದಲು ತಮ್ಮ ಕಳಪೆ ಫಿಟ್‌ನೆಸ್‌ನ್ನು ಸುಧಾರಿಸಿಕೊಳ್ಳುವ ಉದ್ದೇಶದಿಂದ ಆರ್ಮಿ ಬೂಟ್ ಕ್ಯಾಂಪ್‌ನಲ್ಲಿ ಭಾಗವಹಿಸಿತ್ತು.

ರವಿವಾರ ಇಲ್ಲಿ ನಾಲ್ಕನೆ ದಿನದಾಟದಲ್ಲೇ ಇಂಗ್ಲೆಂಡ್‌ನ್ನು ಮಣಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದ ಪಾಕ್ ಆಟಗಾರರು ಹಿರಿಯ ಬ್ಯಾಟ್ಸ್‌ಮನ್ ಯೂನಿಸ್ ಖಾನ್ ನೇತೃತ್ವದಲ್ಲಿ ಮೈದಾನದ ಖ್ಯಾತ ಪೆವಿಲಿಯನ್‌ಗೆ ಸೆಲ್ಯೂಟ್ ಮಾಡಿದ ಬಳಿಕ ಪುಶ್‌ಅಪ್ ನಡೆಸಿ ಗೆಲುವಿನ ಸಂಭ್ರಮಾಚರಣೆಯನ್ನು ವಿಭಿನ್ನವಾಗಿ ಆಚರಿಸಿ ಗಮನ ಸೆಳೆಯಿತು.

42ರ ಹರೆಯದ ಮಿಸ್ಬಾ ಗುರುವಾರ ಟೆಸ್ಟ್‌ನ ಮೊದಲ ದಿನ ಶತಕ ತಲುಪಿದ ತಕ್ಷಣ ಪುಶ್‌ಅಪ್ ನಡೆಸಿ ಶತಕದ ಸಂಭ್ರಮವನ್ನು ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News