ರೋಡ್ ಶೋ: ಗಾಯಗೊಂಡ ಶೀಲಾ ದೀಕ್ಷಿತ್
Update: 2016-07-18 10:53 IST
ಲಕ್ನೊ,ಜುಲೈ 18: ಕಾಂಗ್ರೆಸ್‌ನ ಉತ್ತರಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಶೀಲಾ ದೀಕ್ಷಿತ್ ರೋಡ್‌ಶೋ ನಡೆಸುವ ನಡುವೆ ಫಲಕವೊಂದು ಕುಸಿದ ಪರಿಣಾಮ ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆಯಾದ ಬಳಿಕ ಉತ್ತರಪ್ರದೇಶಕ್ಕೆ ಮೊದಲನೆ ಬಾರಿ ಹೋಗುತ್ತಿರುವಾಗ ಈ ದುರ್ಘಟನೆ ನಡೆದಿದ್ದು ಲಕ್ನೊದ ಅಮೊಸಿ ವಿಮಾನ ನಿಲ್ದಾಣದಿಂದ ಪಕ್ಷದ ಕಚೇರಿಗೆ ತೆರೆದ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಭಾರಿ ಮಳೆಯಾಗಿದ್ದು ರಸ್ತೆ ಬದಿಯಲ್ಲಿದ್ದ ಫಲಕ ಅವರ ಮೇಲೆ ಬಿದ್ದು ಗಾಯಗೊಂಡರೆಂದು ತಿಳಿದು ಬಂದಿದೆ. ಅವರ ಜೊತೆ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಕೂಡಾ ವಾಹನದಲ್ಲಿದ್ದರು ಎಂದು ವರದಿ ತಿಳಿಸಿದೆ.