ಫುಟ್ಬಾಲ್ ಆಡುತ್ತಿದ್ದಾಗ ಸೆನೆಗಲ್ ಆಟಗಾರ ಡೆಂಬಾ ಕಾಲು ಮುರಿತ
Update: 2016-07-18 11:01 IST
ಶಾಂಘೈ, ಜು.18: ಚೈನೀಸ್ ಸೂಪರ್ ಲೀಗ್‌ನಲ್ಲಿ ಪಂದ್ಯ ಆಡುತ್ತಿದ್ದಾಗಲೇ ಸೆನೆಗಲ್‌ನ ಫುಟ್ಬಾಲ್ ಪಟು ಡೆಂಬಾ ಬಾ ಕಾಲುಮೂಳೆ ಮುರಿತಕ್ಕೊಳಗಾದ ದಾರುಣ ಘಟನೆ ರವಿವಾರ ಇಲ್ಲಿ ನಡೆದಿದೆ.
ಡೆಂಬಾ ಶಾಂಘೈ ಎಸ್‌ಐಪಿಜಿ ಫುಟ್ಬಾಲ್ ಕ್ಲಬ್ ವಿರುದ್ಧ ಶಾಂಘೈ ಶೆನ್‌ಹು ತಂಡದ ಪರ ಆಡುತ್ತಿದ್ದಾಗ ಈ ಘಟನೆ ನಡೆದಿದೆ.
31ರ ಹರೆಯದ ಡೆಂಬಾ ಹಾಗೂ ಎದುರಾಳಿ ತಂಡದ ನಾಯಕ ಸನ್ ಕ್ಸಿಯಾಂಗ್ ದ್ವಿತೀಯಾರ್ಧದಲ್ಲಿ ಗೋಲು ಬಾರಿಸುವ ಪೈಪೋಟಿಯಲ್ಲಿದ್ದರು. ಆಗ ಡೆಂಬಾಗೆ ಸನ್ ಕಾಲು ತಾಗಿದ ಪರಿಣಾಮ ಮೈದಾನದಲ್ಲಿ ಕುಸಿದುಬಿದ್ದರು. ಆಗ ಅವರ ಕಾಲು ಮುರಿತಕ್ಕೊಳಗಾಯಿತು.
ಮಾಜಿ ಚೆಲ್ಸಿ ಸ್ಟ್ರೈಕರ್ ಡೆಂಬಾ ಈ ಋತುವಿನಲ್ಲಿ ಚೈನೀಸ್ ಸೂಪರ್ ಲೀಗ್‌ನಲ್ಲಿ 18 ಪಂದ್ಯಗಳನ್ನು ಆಡಿದ್ದು 14 ಗೋಲುಗಳನ್ನು ಬಾರಿಸಿ ಉತ್ತಮ ಫಾರ್ಮ್‌ನಲ್ಲಿದ್ದರು.