ಸಾರ್ವಜನಿಕ ಟಾಯ್ಲೆಟ್ ಸೀಟಿಗೆ ಪೇಪರ್ ಕವರ್ ಮಾಡುವುದು ತಪ್ಪು!
ಹೊರಾಂಗಣ ತಿರುಗಾಟದಲ್ಲಿದ್ದಾಗ ಮೂತ್ರಶಂಕೆ ಬಂದರೆ ಅದಕ್ಕಿಂತ ದೊಡ್ಡ ಸಮಸ್ಯೆ ಇರುವುದಿಲ್ಲ. ಮುಖ್ಯವಾಗಿ ನೀವು ಬರ್ಬರ ಸಾರ್ವಜನಿಕ ಶೌಚಾಲಯಕ್ಕೆ ನುಗ್ಗುವ ಪ್ರಸಂಗ ಬಂದರೆ ಪಜೀತಿಯಾಗುತ್ತದೆ.
ನಿಮಗೆ ಬೇರೆ ಆಯ್ಕೆಗಳೇ ಇಲ್ಲದಾಗ ಒಂದು ಸಾರ್ವಜನಿಕ ಶೌಚಾಲಯಕ್ಕೆ ಹೋಗುತ್ತೀರಿ. ಆದರೆ ಅಲ್ಲಿ ಕೂರುವುದು ಅಥವಾ ಕಾಲಿಡುವ ಬಗ್ಗೆಯೇ ಭಯವಾಗುತ್ತದೆ. ಈ ಮೊದಲು ಬಂದ ಅಸಂಖ್ಯಾತರು ಅಲ್ಲಿ ಹೇಗೆ ಉಗುಳಿದ್ದಾರೆ ಮತ್ತು ಮೂತ್ರ ಮಾಡಿ ಹೋಗಿದ್ದಾರೆ ಎನ್ನುವ ಭಯ. ಈ ಯೋಚನೆಯೇ ಬೆವರಿಳಿಸಿಬಿಡುತ್ತದೆ. ಸೂಕ್ಷ್ಮಾಣುಗಳು, ಬ್ಯಾಕ್ಟೀರಿಯ ಮತ್ತು ಇನ್ಯಾವುದೋ ಸೋಂಕು ದೇಹಕ್ಕೆ ಹತ್ತಲು ಕಾಯುತ್ತಿವೆಯೇ ಎನಿಸುತ್ತದೆ.
ಇಂತಹ ಸನ್ನಿವೇಶದಲ್ಲಿ ಮೊದಲು ಮಾಡುವುದೇನು? ಶೌಚದ ಸೀಟನ್ನು ಟಾಯ್ಲೆಟ್ ಪೇಪರ್‌ನಿಂದ ಕವರ್ ಮಾಡಿ ರಕ್ಷಣಾ ಪದರವನ್ನು ಸೀಟು ಮತ್ತು ನಿಮ್ಮ ಚರ್ಮದ ನಡುವೆ ತರುತ್ತೀರಿ. ಅಲ್ಲವೆ? ಹೀಗೆ ಮಾಡುವುದು ತಪ್ಪು. ಇದು ಉತ್ತಮ ವಿಧಾನವೆಂದು ಆಲೋಚಿಸಿದವರೆಲ್ಲರೂ ದಡ್ಡರು. ಹಾಗೆ ಮಾಡುವುದರಿಂದ ನೀವು ಸ್ವತಃ ಬ್ಯಾಕ್ಟೀರಿಯಗಳನ್ನು ದೇಹಕ್ಕೆ ಆಹ್ವಾನಿಸಿಕೊಳ್ಳುವಿರಿ. ಪೇಪರನ್ನು ಇದ್ದಲ್ಲೇ ಬಿಟ್ಟರೆ ಉತ್ತಮ.
ಏಕೆ ಗೊತ್ತೆ? ಈ ವಿಡಿಯೋ ನೋಡಿ.
ಕೃಪೆ: zeenews.india.com