×
Ad

ಲೋಧಾ ಸಮಿತಿ ವರದಿಯ ಶಿಫಾರಸು ಎತ್ತಿ ಹಿಡಿದ ಸುಪ್ರೀಂಕೋರ್ಟ್

Update: 2016-07-18 15:09 IST

  ಹೊಸದಿಲ್ಲಿ, ಜು.18: ಬಿಸಿಸಿಐ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಲೋಧಾ ಸಮಿತಿ ವರದಿ ಮಾಡಿರುವ ಶಿಫಾರಸುಗಳ ಬಗ್ಗೆ ಮುಖ್ಯ ನ್ಯಾಯಮೂರ್ತಿ ಟಿಎಸ್ ಥಾಕೂರ್ ಹಾಗೂ ಜಸ್ಟಿಸ್ ಇಬ್ರಾಹೀಂ ಕಲಿಫುಲ್ಲಾ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ ಸೋಮವಾರ ಮಹತ್ವದ ಆದೇಶ ನೀಡಿದೆ.

ಬಿಸಿಸಿಐನಲ್ಲಿ ಯಾವುದೇ ಸಚಿವರಿಗೆ ಅವಕಾಶ ನೀಡಬಾರದು. ಒಂದೇ ರಾಜ್ಯ-ಒಂದೇ ಮತ ಪಾಲಿಸಿಯನ್ನು ಜಾರಿಗೆ ತರಬೇಕು. ದೇಶದಲ್ಲಿ ಬೆಟ್ಟಿಂಗ್‌ನ್ನು ಕಾನೂನುಬದ್ಧಗೊಳಿಸಬೇಕೆ ಎನುವುದನ್ನು ಸಂಸತ್‌ನಲ್ಲಿ ನಿರ್ಧರಿಸಬೇಕು ಎಂದು ಸುಪ್ರೀಂ ತನ್ನ ತೀರ್ಪಿನಲ್ಲಿ ತಿಳಿಸಿದೆ.

‘‘ಈ ತೀರ್ಪು ಕೆಲವು ಸುಧಾರಣೆ ತರುವ ವಿಶ್ವಾಸವಿದೆ. ಬಿಸಿಸಿಐ ಇದನ್ನು ಸ್ವೀಕರಿಸಲೇಬೇಕು. ಲೋಧಾ ಸಮಿತಿ ಮಾಡಿರುವ ಶಿಫಾರಸುಗಳನ್ನ ಜಾರಿಗೆ ತರಲು ಆರು ತಿಂಗಳು ಕಾಲಾವಕಾಶ ನೀಡಲಾಗುವುದು’’ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

 ತೀರ್ಪನ್ನು ಜಾರಿಗೆ ತರುವ ಸಂಬಂಧ ನಾವು ಹೆಚ್ಚಿನ ಗೌರವ ನೀಡಲಿದ್ದೇವೆ ಎಂದು ಬಿಸಿಸಿಐ ನ್ಯಾಯಾಲಯಕ್ಕೆ ತಿಳಿಸಿದೆ.

ಬಿಸಿಸಿಐ ಕಾರ್ಯಚಟುವಟಿಕೆಯನ್ನು ಗಮನಿಸಿ, ಇನ್ನಷ್ಟು ಪಾರದರ್ಶಕತೆ ತರುವ ಉದ್ದೇಶದಿಂದ ಸುಪ್ರೀಂಕೋರ್ಟ್ 2015ರ ಜನವರಿಯಲ್ಲಿ ಆರ್‌ಎಂ ಲೋಧ ಸಮಿತಿಯನ್ನು ರಚಿಸಿತ್ತು.

2016ರ ಜನವರಿಯಲ್ಲಿ ಸುಪ್ರೀಂಕೋರ್ಟ್ ಮೂವರು ಸದಸ್ಯರು ಇರುವ ಲೋಧ ಸಮಿತಿ ಮಾಡಿರುವ ಶಿಫಾರಸುಗಳನ್ನು ಬಿಡುಗಡೆ ಮಾಡಿತ್ತು. ಉತ್ತಮ ಆಡಳಿತಕ್ಕಾಗಿ ಕೆಲವೊಂದು ಬದಲಾವಣೆ ಮಾಡಲು ಸಲಹೆ ನೀಡಿತ್ತು.. ವಯಸ್ಸು ಹಾಗೂ ಅಧಿಕಾರದ ಅವಧಿ, ಸಚಿವರು ಯಾವುದೇ ಹುದ್ದೆಯಲ್ಲಿರಬಾರದು, ಒಂದೇ ರಾಜ್ಯ-ಒಂದೇ ನಿಯಮ ಹಾಗೂ ಬಿಸಿಸಿಐ ನಿಧಿಯ ಹಂಚಿಕೆ ಹಾಗೂ ಹೊಣೆಗಾರಿಕೆ ಪ್ರಮುಖ ಅಂಶವಾಗಿದೆ.

ಬಿಸಿಸಿಐ ಹಾಗೂ ಅದರ ಮಾನ್ಯತೆಯಿರುವ ಘಟಕಗಳ ಆಡಳಿತ ಸುಧಾರಣೆಯ ಉದ್ದೇಶ ಲೋಧ ಸಮಿತಿಯಲ್ಲಿತ್ತು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News