ಹಾಮ್ಸ್ ಮಾರ್ಟ್‌ನಿಂದ ‘ಸದೃಢ ಮತ್ತು ಉಜ್ವಲ’ ಅಭಿಯಾನ

Update: 2016-07-18 10:27 GMT

ಮಂಗಳೂರು,ಜು.18: ಕ್ರೀಡೆಯ ಮೂಲಕ ದೈಹಿಕ ಸದೃಢತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕ್ರೀಡಾ ಸಾಮಗ್ರಿಗಳನ್ನು ಪೂರೈಸುವ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ಹಾಮ್ಸ್ ಮಾರ್ಟ್ ವತಿಯಿಂದ ಹಮ್ಮಿಕೊಂಡಿರುವ ‘ಸದೃಢ ಮತ್ತು ಉಜ್ವಲ’ ಅಭಿಯಾನ’ಕ್ಕೆ ಟೆನಿಸ್‌ನ ಮಾಜಿ ಚಾಂಪಿಯನ್, ಖ್ಯಾತ ಟೆನಿಸ್ ಕೋಚ್ ಎರ್ನಿಕೋ ಪಿಪರ್ನೊ ಹಾಗೂ ಮಾಜಿ ರಣಜಿ ಕ್ರಿಕೆಟ್ ಆಟಗಾರ ಅರ್ಜಿತ್ ಘೋಷ್ ಚಾಲನೆ ನೀಡಿದರು.

ನಗರದ ಸಿಟಿಸೆಂಟರ್ ಮಾಲ್‌ನ ನಾಲ್ಕನೆ ಮಹಡಿಯಲ್ಲಿರುವ ಹಾಮ್ಸ್ ಮಾರ್ಟ್‌ನ ಮಳಿಗೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಸಂಸ್ಥೆಯ ಆಡಳಿತ ನಿರ್ದೇಶಕ ವೌರಿಸ್ ಡೇಸಾ, ಸಿಲ್ವಿಯಾ ಡೇಸಾ ಉಪಸ್ಥಿತರಿದ್ದರು.

ಅಭಿಯಾನದ ಮೂಲಕ ಹಾಮ್ಸ್ ಮಾರ್ಟ್ ವಿವಿಧ ರೀತಿಯ ಕ್ರೀಡಾ ಸಾಮಗ್ರಿಗಳ ಬಗ್ಗೆ ಪ್ರಚಾರ ನೀಡಲಿದ್ದು, ಮಳಿಗೆಯಲ್ಲಿಯೇ ಟ್ರೆಡ್‌ಮಿಲ್ ಓಟದಂತಹ ಕ್ರೀಡಾ ಚಟುವಟಿಕೆಗಳ ಮೂಲಕ ‘100 ಕ್ಯಾಲರಿಗಳನ್ನು ಕಡಿಮೆ ಮಾಡಲು 10 ನಿಮಿಷಗಳ ಓಟ’ ಎಂಬ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.

ಪ್ರತಿನಿತ್ಯ ಕ್ರೀಡಾಪಟುಗಳು ಈ ಅಭಿಯಾನದಲ್ಲಿ ಭಾಗವಹಿಸಿ ಕ್ರೀಡಾಳುಗಳಿಗೆ ಪ್ರೋತ್ಸಾಹ, ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ. ಕ್ರೀಡೆಗಳಲ್ಲಿ ಆಸಕ್ತಿ ಇರುವವರು ಮತ್ತು ಕ್ರೀಡೆಯ ಮೂಲಕ ದೇಹ ಸದೃಢತೆಯನ್ನು ಬಯಸುವರಿಗಾಗಿ ಬಾಸ್ಕೆಟ್ ಬಾಲ್, ಹ್ಯಾಂಡ್ ಬಾಲ್, ಸೈಕ್ಲಿಂಗ್, ಆರ್ಚರಿ, ಟೇಬಲ್ ಟೆನ್ನಿಸ್, ಸ್ಕಿಪ್ಪಿಂಗ್, ಟ್ರೆಡ್‌ಮಿಲ್ ಓಟ, ಟ್ರಾಂಪಲಿನ್ ಜಂಪಿಂಗ್, ಇನ್ ಹೌಸ್ ಗಾಲ್ಫ್ ತರಬೇತಿ, ಸ್ಕೇಟಿಂಗ್ ಮೊದಲಾದ ಅವಕಾಶಗಳನ್ನು ಕಲ್ಪಿಸಲಾಗುವುದು. ದೈಹಿಕ ಸದೃಢತೆಯನ್ನು ಬಯಸುವವರು, ಸಿಟಿ ಸೆಂಟರ್ ಮಾಲ್‌ಗೆ ಭೇಟಿ ನೀಡುವ ಸಂದರ್ಭ ಕುಟುಂಬ ಸಮೇತರಾಗಿ ಹಾಮ್ಸ್ ಮಾರ್ಟ್‌ನಲ್ಲಿ 10 ನಿಮಿಷಗಳ ಟ್ರೆಡ್‌ಮಿಲ್ ಓಟದಲ್ಲಿ ಭಾಗವಹಿಸಬಹುದಾಗಿದೆ.

ಕ್ರೀಡೆಯ ಬಗ್ಗೆ ಚರ್ಚೆ ಮತ್ತು ಸಂವಾದಕ್ಕೂ ಹಾಮ್ಸ್ ಮಾರ್ಟ್ ಅವಕಾಶ ಕಲ್ಪಿಸುತ್ತಿದ್ದು, ಕ್ರೀಡೆಗೆ ಉತ್ತೇಜನ ನೀಡಲು ಬಯಸುವ ಕ್ರೀಡಾಪಟುಗಳು ಸಂಸ್ಥೆಯ ಪಾಲುದಾರರಾಗಿಯೂ ಕಾರ್ಯ ನಿರ್ವಹಿಸಲು ಅವಕಾಶವಿದೆ ಎಂದು ಹಾಮ್ಸ ಮಾರ್ಟ್‌ನ ಆಡಳಿತ ನಿರ್ದೇಶಕ ವೌರಿಸ್ ಡೇಸಾ ವಿವರ ನೀಡಿದ್ದಾರೆ.

ವಿಶ್ವದರ್ಜೆಯ 50 ಟಿವಿ ನಿರೂಪಕರ ಗುರಿ!’

ಉದ್ಯೋಗಾವಕಾಶಕ್ಕೆ ಒತ್ತು ನೀಡುವ ಉದ್ದೇಶದಿಂದ ಹಾಮ್ಸ್ ಮಾರ್ಟ್ ‘ವಿಶ್ವದರ್ಜೆಯ 50 ಟಿವಿ ನಿರೂಪಕರ ಗುರಿ’ ಎಂಬ ವಿನೂತನ ಕಾರ್ಯಕ್ರಮವೊಂದಕ್ಕೆ ಮುಂದಾಗಿದೆ. ಒಎನ್‌ಜಿಸಿ- ಎಂಆರ್‌ಪಿಎಲ್‌ನ ಮಾಜಿ ಪ್ರಧಾನ ವ್ಯವಸ್ಥಾಪಕರಾಗಿರುವ ಪಿ.ಎ. ಜೋಶ್ ಅವರ ನಾಯಕತ್ವದಲ್ಲಿ ಟಿವಿ ನಿರೂಪಕರಾಗುವವರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ.

ನಿರೂಪಕರಿಗೆ ಅಗತ್ಯವಿರುವ ಮಾತಿನ ಕಲೆ ಮತ್ತು ಸಂವಹನ ಕೌಶಲ್ಯವನ್ನು ವೃದ್ದಿಸಲು ಆಯ್ದ 50 ಮಂತಿಗೆ ತರಬೇತಿ ನೀಡಲಾಗುವುದು. ತರಬೇತಿಗೆ ಆಯ್ಕೆ ಪ್ರಕ್ರಿಯೆ ಆಗಸ್ಟ್ 1ರಿಂದ ಆರಂಭಗೊಳ್ಳಲಿದೆ. ಇದಕ್ಕಾಗಿ, ಜುಲೈ 20ರಿಂದ ಹಾಮ್ಸ್ ಮಾರ್ಟ್‌ನಲ್ಲಿ ನೋಂದಣಿ ಕಾರ್ಯ ಆರಂಭಗೊಳ್ಳಲಿದೆ ಎಂದು ಪಿ.ಎ. ಜೋಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News