ಕಾಶ್ಮೀರದ ಬೀದಿಗಳಲ್ಲಿ ಇಲ್ಲ ಪ್ರತ್ಯೇಕತಾವಾದಿ ನಾಯಕರ ಮಕ್ಕಳು!
ಕಾಶ್ಮೀರದಲ್ಲಿ ಮತ್ತೊಂದು ಬೇಸಗೆ ಪ್ರತಿಭಟನೆಗಳಿಂದ ಮುಗಿದು ಹೋಗಿದೆ. 38 ಕಾಶ್ಮೀರಿ ಯುವಜನರು ತಮ್ಮ ಜೀವ ಕಳೆದುಕೊಂಡಿದ್ದಾರೆ. 3100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಆದರೆ ಈ ಪ್ರತ್ಯೇಕತಾವಾದಿ ಅಲೆಗೆ ಪ್ರಚೋದನೆ ನೀಡುವ ನಾಯಕರ ಮಗ, ಮಗಳು ಮತ್ತು ಸಹೋದರರು ಮಾತ್ರ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರ ಡೆಮಾಕ್ರೆಟಿಕ್ ಲಿಬರೇಶನ್ ಪಾರ್ಟಿ ಅಧ್ಯಕ್ಷ ಮತ್ತು ಪ್ರತ್ಯೇಕತಾವಾದಿ ನಾಯಕ ಹಶೀಮ್ ಖುರೇಶಿಯ ಮಗ ಹಕ್ಕುಗಳ ಕಾರ್ಯಕರ್ತ ಜುನೈದ್ ಖುರೇಶಿ ಹೇಳುವ ಪ್ರಕಾರ, “ಜಿಹಾದ್ ಅಷ್ಟು ಮುಖ್ಯವಾಗಿದ್ದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿಗಳು ಮತ್ತು ಅವರ ಮಕ್ಕಳು ಏಕೆ ಬಂದೂಕು ಹಿಡಿಯುವುದಿಲ್ಲ. ಅವರ ಮಕ್ಕಳನ್ನು ಸುರಕ್ಷಿತ ಸ್ಥಳಗಳಲ್ಲಿ ಏಕೆ ಇಡಲಾಗಿದೆ?” ಎಂದು ಪ್ರಶ್ನಿಸುತ್ತಾರೆ.
ಸ್ವಲ್ಪ ಆಳವಾಗಿ ಹುಡುಕಿದರೆ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉತ್ತಮ ವೃತ್ತಿಯಲ್ಲಿ ಮುಂದುವರಿದು ಬಂದೂಕು ಮತ್ತು ಕಲ್ಲುಗಳಿಂದ ದೂರವೇ ಉಳಿದಿರುವುದು ಕಾಣುತ್ತದೆ. 86 ವರ್ಷದ ಸೈಯದ್ ಅಲಿ ಶಾ ಗಿಲಾನಿ ಕಟು ಪ್ರತ್ಯೇಕತಾವಾದಿ ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಪಕ್ಷಗಳಾದ ಆಲ್ ಪಾರ್ಟೀಸ್ ಹುರಿಯತ್ ಕಾನ್ಫರೆನ್ಸ್‌ನ ನಾಯಕ. ಆದರೆ ತಮ್ಮ ಪ್ರತ್ಯೇಕತಾವಾದಿ ಆದರ್ಶಗಳನ್ನು ಮಕ್ಕಳಲ್ಲಿ ತುಂಬಿಸಲು ಅವರು ವಿಫಲರಾಗಿದ್ದಾರೆ. “ಆತನ ಹಿರಿಯ ಮಗ ನಯೀನ್ ಗಿಲಾನಿ ಮತ್ತು ಆತನ ಪತ್ನಿ ಬೈಜಿಯ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ವೈದ್ಯ ವೃತ್ತಿಯಲ್ಲಿದ್ದಾರೆ. ಅವರ ಮತ್ತೊಬ್ಬ ಮಗ ದಕ್ಷಿಣ ದೆಹಲಿಯಲ್ಲಿ ನೆಲೆಸಿದ್ದಾರೆ. ಒಬ್ಬ ಮಗಳು ಫರಾತ್ ಗಿಲಾನಿ ಜೇಧಾದಲ್ಲಿ ಅದ್ಯಾಪಕಿ ಮತ್ತು ಆಕೆಯ ಪತಿ ಅಲ್ಲೇ ಇಂಜಿನಿಯರ್” ಎನ್ನುತ್ತವೆ ಮೂಲಗಳು. ಗಿಲಾನಿಯ ಮಕ್ಕಳು ಯಾರೂ ತಂದೆಯ ಹಾದಿಯಲ್ಲಿ ಸಾಗಲು ಸಿದ್ಧರಿಲ್ಲ. ಗಿಲಾನಿಯ ಮೊಮ್ಮಕ್ಕಳು ಎಲ್ಲರೂ ಖ್ಯಾತ ಕ್ರಿಶ್ಚಿಯನ್ ಮಿಷನರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಅವರ ಸೋದರ ಸಂಬಂಧಿ ಗುಲಾಂ ನಬಿ ಫಾಲ್ ಈಗ ಲಂಡನಿನಲ್ಲಿದ್ದಾರೆ. ಎಸ್‌ಎಎಸ್ ಗಿಲಾನಿ ಅವರು ಮಾತ್ರ ತಮ್ಮ ಮಕ್ಕಳನ್ನು ಕಾಶ್ಮೀರದ ಹಿಂಸೆಯಿಂದ ದೂರವಿರಿಸಿದ ಪ್ರತ್ಯೇಕತಾವಾದಿಯಲ್ಲ.
ಗಿಲಾನಿಯ ಹುರಿಯತ್ ಕಾನ್ಫರೆನ್ಸ್ ವಕ್ತಾರ ಸರ್ವಾರ್ ಯಾಕೂಬ್ ಮ ಅಯಾಜ್ ಅಕ್ಬರ್ ಈಗ ಪುಣೆಯಲ್ಲಿ ಮ್ಯಾನೇಜ್ಮೆಂಟ್ ಅಧ್ಯಯನದಲ್ಲಿದ್ದಾರೆ. ಮತ್ತೊಬ್ಬ ಹುರಿಯತ್ ನಾಯಕ ಅಬ್ದುಲ್ ಅಜೀಜ್ ದರ್ ಅಲಿಯಾಸ್ ಜನರಲ್ ಮೂಸಾನ ಒಬ್ಬ ಮಗ ಕಂಪ್ಯೂಟರ್ ಅಪ್ಲಿಕೇಶನ್ಸ್ ಕಲಿತರೆ ಮತ್ತೊಬ್ಬ ಮಗ ಪಶು ಸಂಗೋಪನಾ ಇಲಾಖೆಯಲ್ಲಿದ್ದಾರೆ. ಆನರಲ್ ಮೂಸ 1990ರಲ್ಲಿ ಹಿಜ್ಬುಲ್ ಸಂಘಟನೆಯ ಭಯೋತ್ಪಾದಕನೆಂದು ಖ್ಯಾತನಾಗಿದ್ದ. 2010ರ ಕಲ್ಲು ಎಸೆಯುವ ಪ್ರತಿಭಟನೆಯನ್ನು ಪ್ರಚೋದಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
ಆಸಿಯಾ ಅಂದ್ರಾಬಿ ದುಖ್ತರನ್ ಇ ಮಿಲತ್ ನೇತೃತ್ವ ವಹಿಸಿದ್ದಾರೆ. 1990ರಿಂದ ತನ್ನ ಪತಿ ಆಶಿಕ್ ಹುಸೇನ್ ಫಕ್ತೂ ಜೊತೆಗೂಡಿ ಜಿಹಾದಿ ಚಳವಳಿಯನ್ನು ಕಾಶ್ಮೀರದಲ್ಲಿ ನೆಲೆಯೂರಿಸಲು ಪ್ರಯತ್ನಿಸುತ್ತಿದ್ದಾರೆ. ಅಂದ್ರಾಬಿ ಸ್ವತಃ ಬಯೋಕೆಮಿಸ್ಟ್ರಿ ಪದವಿ ಹೊಂದಿದವರು. ಆದರೆ ತನ್ನ ಮಕ್ಕಳನ್ನು ಮಲೇಷ್ಯಾಗೆ ಉನ್ನತ ವ್ಯಾಸಂಗಕ್ಕೆ ಕಳುಹಿಸಲು ಭಾರತದ ಪಾಸ್‌ಪೋರ್ಟ್ ಕೇಳಿಕೊಂಡವರು! “ಆಕೆಯ ಹಿರಿಯ ಮಗ ಮೊಹಮ್ಮದ್ ಬಿನ್ ಖಾಸಿಂ ಮಲೇಷ್ಯಾದ ಇಸ್ಲಾಮಿಕ್ ಯುನಿವರ್ಸಿಟಿಯಲ್ಲಿ ಇನ್ಫೋ ಟೆಕ್ ಕಲಿಯುತ್ತಿದ್ದಾನೆ ಮತ್ತು ಕಿರಿಯ ಮಗ ಅಹಮದ್ ಬಿನ್ ಕಾಸಿಂ ಕಣಿವೆಯ ಕ್ರಿಶ್ಚಿಯನ್ ಮಿಷನರಿ ಶಾಲೆಯಲ್ಲಿ ಓದುತ್ತಿದ್ದಾನೆ" ಎಂದು ಮೂಲಗಳು ಹೇಳಿವೆ. ಆಕೆಯ ಸಹೋದರಿ ಮರಿಯಂ ಅಂದ್ರಾಬಿ ಕೂಡ ಮಲೇಷ್ಯಾದಲ್ಲಿ ನೆಲೆಸಿದ್ದಾರೆ.
ಪಾಕಿಸ್ತಾನಿ ಪರ ಭಯೋತ್ಪಾದನಾ ಸಂಘಟನೆ ಹೆಜ್ಬೊಲ್ಲಾದ ಕಮಾಂಡರ್ ಮಸ್ರತ್ ಅಲಾಂ 2003ರಲ್ಲಿ ಗಿಲಾನಿ ಜತೆ ಹುರಿಯತ್ ಸೇರಿದ್ದಾರೆ. ಅವರು 2008ರ ಅಮರನಾಥ ಭೂ ಚಳವಳಿ ಮತ್ತು 2010ರ ಕಾಶ್ಮೀರ ಕಣಿವೆಯ ಅಶಾಂತಿಯ ಪ್ರಮುಖ ಕಾರಣಕರ್ತರಲ್ಲಿ ಒಬ್ಬರು. 48 ವರ್ಷದ ಅಲಾಂ ಉದ್ಯಮ ಕುಟುಂಬದವರು. ಗಿಲಾನಿಯ ನಂತರ ಅಲಾಂ ಎಂದೇ ಹೇಳಲಾಗುತ್ತಿದೆ. ಕಾಶ್ಮೀರದ ಮಕ್ಕಳ ಶಿಕ್ಷಣ ಈಗಿನ ಅಶಾಂತಿಯಿಂದಾಗಿ ಹಾಳಾಗಿದ್ದರೂ ಅಲಾಂ ಮಕ್ಕಳು ಮಾತ್ರ ದೆಹಲಿಯ ಉತ್ತಮ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ.
ಹುರಿಯತ್ ಕಾನ್ಫರೆನ್ಸ್ ಮತ್ತು ಮಿರ್ವೈಜ್‌ನ ಸುಧಾರಣಾ ಶಾಖೆಯ ಅಧ್ಯಕ್ಷ ಡಾ ಉಮರ್ ಫಾರೂಕ್ ಕಾಶ್ಮೀರಿ ಮೂಲದ ಅಮೆರಿಕ ಪ್ರಜೆಯನ್ನು ಮದುವೆಯಾಗಿದ್ದಾರೆ. ಆತನ ಸಹೋದರಿ ರಬಿಯಾ ಫರೂಖ್ ವೈದ್ಯೆಯಾಗಿ ಅಮೆರಿಕದಲ್ಲಿ ನೆಲೆಸಿದ್ದಾರೆ.