×
Ad

ಕಾಸರಗೋಡು: ಪೊಯಿನಾಚಿ ಪರಿಸರದಲ್ಲಿ ಸರಣಿ ಕಳ್ಳತನ

Update: 2016-07-18 18:02 IST

ಕಾಸರಗೋಡು, ಜು.18: ಪೊಯಿನಾಚಿ ಪರಿಸರದಲ್ಲಿ ಸರಣಿ ಕಳ್ಳತನ ನಡೆದಿದ್ದು, ಚರ್ಚ್, ಮನೆ, ಅಂಗಡಿಗಳಿಗೆ ನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದು ಕಳವುಗೈದಿದ್ದಾರೆ.

ಪೊಯಿನಾಚಿ ಸೈಂಟ್ ಮೇರಿಸ್ ಇಗರ್ಜಿಯ ಕಾಣಿಕೆ ಡಬ್ಬಿಯಿಂದ ಹಣ ಕಳವುಗೈಯಲಾಗಿದೆ. ನಾಯಮ್ಮಾರಮೂಲೆಯ ಅಬ್ದುರ್ರಝಾಕ್ ಎಂಬವರ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಮೂರು ಪವನ್ ಚಿನ್ನಾಭರಣ, ಒಂದು ಟ್ಯಾಬ್ ಮತ್ತು ನಾಲ್ಕು ಸಾವಿರ ರೂ. ನಗದು ಕಳವುಗೈದಿದ್ದಾರೆ. ಇತರ ಎರಡು ಮನೆಗಳಿಗೂ ನುಗ್ಗಿ ಕಳವಿಗೆ ವಿಫಲ ಯತ್ನ ನಡೆದಿದೆ.

ಚಟ್ಟಂಚಾಲ್ನ ಹೋಟೆಲೊಂದರಲ್ಲೂ ಕಳವಿಗೆ ಯತ್ನ ನಡೆದಿದೆ. ಈ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News