×
Ad

ಎತ್ತಿನಹೊಳೆ ವಿಚಾರದಲ್ಲಿ ಯಾರಿಗೂ ಅನ್ಯಾಯವಾಗಬಾರದು: ನಟ ಶಿವರಾಜ್ ಕುಮಾರ್

Update: 2016-07-18 19:18 IST

ಬೆಳ್ತಂಗಡಿ, ಜು.18: ಕೋಲಾರದ ಜನತೆಯ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿ ಎಂದಷ್ಟೇ ನಾವು ಆಗ್ರಹಿಸಿದ್ದೇವೆ ಹೊರತು ಎತ್ತಿನಹೊಳೆ ಯೋಜನೆಯನ್ನು ಜಾರಿ ಮಾಡಿ ಎಂದು ಹೇಳುತ್ತಿಲ್ಲ. ಮುಖ್ಯವಾಗಿ ಸರಕಾರ ಈ ಬಗ್ಗೆ ಗಮನಹರಿಸಬೇಕು. ಕಲಾವಿದರಾದ ನಮಗೆ ಇಡೀ ರಾಜ್ಯದ ಎಲ್ಲಾ ಜನರು ಒಂದೇ. ದಕ್ಷಿಣ ಕನ್ನಡ ಜಿಲ್ಲೆಯ ಜನರೊಂದಿಗೆ ಮಾತುಕತೆ ನಡೆಸಬೇಕು. ಇಲ್ಲಿಯ ಜನರಿಗೂ ಅನ್ಯಾಯವಾಗಬಾರದು ಎಂದು ಕನ್ನಡ ಚಲನಚಿತ್ರ ನಟ ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದರು.

ಅವರು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದರು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಿಜ ಘಟನೆ ಏನು ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಮುಖ್ಯವಾಗಿ ಮಾಧ್ಯಮದವರು ಈ ಬಗ್ಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಗಣಪತಿ ಅವರ ಪತ್ನಿಯ ವೇದನೆಯ ಬಗ್ಗೆ ಸರಕಾರ ಅರಿತುಕೊಳ್ಳಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಧರ್ಮಸ್ಥಳಕ್ಕೆ ಆಗಾಗ ಬರುತ್ತಿದ್ದು, ಚಿಗುರಿದ ಕನಸು ಚಲನಚಿತ್ರದ ಶೂಟಿಂಗ್ ನಡೆಯುತ್ತಿದ್ದ ಸಂದರ್ದಲ್ಲಿ ಧರ್ಮಸ್ಥಳದಲ್ಲೇ ಒಂದು ತಿಂಗಳು ವಾಸ್ತವ್ಯವಿದ್ದ ಬಗ್ಗೆ ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News