ಟ್ಯಾಲೆಂಟ್ ಸಹಯೋಗದಲ್ಲಿ ವಿವಿಧ ಮಸೀದಿಗಳಲ್ಲಿ ವನಮಹೋತ್ಸವ

Update: 2016-07-18 14:59 GMT

ಮಂಗಳೂರು, ಜು.18: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಹಯೋಗದಲ್ಲಿ ಮಂಗಳೂರು ತಾಲೂಕಿನ ವಿವಿಧ ಮಸೀದಿಗಳಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು.

 ಸ್ಥಳೀಯ ಜಮಾಅತ್ ಕಮಿಟಿ, ಯಂಗ್‌ಮೆನ್ಸ್ ಮತ್ತು ಜಮಾಅತರ ಸಹಕಾರದಲ್ಲಿ ವನಮಹೋತ್ಸವವನ್ನು ಮಂಗಳೂರು ತಾಲೂಕಿನ ಅನೇಕ ಮಸೀದಿಗಳಲ್ಲಿ ಆಚರಿಸಲಾಯಿತು. ಕೋಡಿಜಾಲ್, ಮಲಾರ್, ಪಜೀರ್, ಬದ್ರಿಯಾ ನಗರ ಮಲಾರ್, ನ್ಯೂಪಡ್ಪು, ಬೆಳ್ಮದೋಟ, ಗ್ರಾಮ ಚಾವಡಿ, ಕುತ್ತಾರ್ ಮಜಲ್‌ತೋಟ, ಬರುವ, ಕುಂಡೂರ್ ಅಂಬ್ಲಮೊಗರು, ಎಲ್ಯಾರ್, ದೇರಿಕಟ್ಟೆ ಪಾವೂರು, ಫರೀದ್ ನಗರ ಮಸೀದಿಗಳಿಗೆ ಸಸಿಗಳನ್ನು ತಲುಪಿಸಿ ವನಮಹೋತ್ಸವವನ್ನು ಆಚರಿಸಲಾಯಿತು.

ರಿಫಾಯಿ ಜುಮಾ ಮಸೀದಿ ಕೋಡಿಜಾಲ್ ಇದರ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಉಪಾಧ್ಯಕ್ಷ ಹಾಜಿ ಅಬ್ದುಲ್ ಖಾದರ್, ಕಾರ್ಯದರ್ಶಿ ಹಾಜಿ ಅಬೂಬಕ್ಕರ್, ಮಸೀದಿ ಖತೀಬ್ ಹಾಜಿ ಅಬೂಬಕರ್ ಸಖಾಫಿ, ಯಂಗ್‌ಮೆನ್ಸ್‌ನ ಗೌರವಾಧ್ಯಕ್ಷ ಅಬ್ದುರ್ರಹ್ಮಾನ್ ಕೆ.ಎಂ., ಕಾರ್ಯದರ್ಶಿ ಕೆ.ಎಸ್ ಅಬ್ದುರ್ರಹ್ಮಾನ್, ಲತೀಫ್ ಕೆ.ಎಂ, ಶರೀಫ್ ಕೆ.ಎಸ್., ಆಸಿಫ್, ಮುನೀರ್, ಮುಹಮ್ಮದ್ ಕೆ.ಎಂ., ರಹ್ಮಾನ್ ಕೆ.ಎಚ್., ಮಲಾರ್ ಮಸೀದಿಯ ಅಧ್ಯಕ್ಷ ಎಚ್.ಎಂ. ಮುಹಮ್ಮದ್ ಮಾಸ್ಟರ್, ಮುಅಝ್ಝಿನ್ ಅಬ್ದುಲ್ ಹಕೀಂ ಮುಸ್ಲಿಯಾರ್, ಮಜಲ್‌ತೋಟ ಮಸೀದಿಯ ಕಾರ್ಯದರ್ಶಿ ಇಬ್ರಾಹೀಂ, ಮದಕ ಮಸೀದಿಯ ಸದರ್ ಮುಅಲ್ಲಿಮ್ ಅಬ್ದುಲ್ಲತೀಫ್ ದಾರಿಮಿ ರೆಂಜಾಡಿ, ಬರುವ ಮಸೀದಿಯ ಖತೀಬ್ ಮುಹಮ್ಮದ್ ರಫೀಕ್ ದಾರಿಮಿ ಮತ್ತು ಎಸ್‌ಬಿವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಟ್ಯಾಲೆಂಟ್‌ನ ರಫೀಕ್ ಮಾಸ್ಟರ್, ಅಬ್ದುಸ್ಸಲಾಂ ಮುಸ್ಲಿಯಾರ್ ಪೆರ್ನೆ, ರಿಯಾಝ್ ಕಣ್ಣೂರು, ಡಿ. ಅಬ್ದುಲ್ ಹಮೀದ್ ಕಣ್ಣೂರು, ಅಶ್ಪರ್ ಹುಸೇನ್ ಬೆಂಗರೆ, ಅಬ್ದುಲ್ ಮಜೀದ್ ತುಂಬೆ, ಹುಸೈನ್ ಬಡಿಲ, ಮುಹಮ್ಮದ್ ಸ್ವರೂಪ್ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News