ಹಫ್ತಾ ಹಣಕ್ಕಾಗಿ ಬೆದರಿಕೆ: ಸಿಸಿಬಿ ಪೊಲೀಸರಿಂದ ಮೂವರ ಸೆರೆ

Update: 2016-07-18 15:17 GMT

ಮಂಗಳೂರು, ಜು.18;ನಗರದ ಬಿಜೈ ನಿವಾಸಿಯೊಬ್ಬರಿಗೆ ಹಫ್ತಾ ಹಣಕ್ಕಾಗಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆಕಾಶಭವನದ ಅಯ್ಯಪ್ಪ ಭಜನಾ ಮಂದಿರದ ಬಳಿಯ ಪ್ರೀತಂ(22), ಆಕಾಶಭವನ ಮಾಲಾಡಿ ರಸ್ತೆಯ ರಿತೇಶ್(19)ಕಾವೂರು ಕುಂಜತ್ತ ಬೈಲ್ ದೇವಿನಗರದ ವಿಶಾಲ್ ಕುಮಾರ್(22) ಎಂಬವರನ್ನು ಬಂಧಿಸಲಾಗಿದೆ.

ನಗರದ ಬಿಜೈ ನಿವಾಸಿಯೊಬ್ಬರಿಗೆ ಈ ಹಿಂದೆ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಗೌರಿಶ್ ಎಂಬಾತ 25 ಸಾವಿರ ರೂ . ಹಫ್ತಾ ನೀಡುವಂತೆ ಬೆದರಿಕೆ ಕರೆ ಮಾಡಿ ನಂತರ ಆತನ ಸಹಚರರ ಮೂಲಕ ಕರೆ ಮಾಡಿ ಬೆದರಿಕೆಯೊಡ್ಡಿ, ನಂತರ ಹಣ ನೀಡದೇ ಇದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆಯೊಡ್ಡಿದ್ದ. ಈ ಬಗ್ಗೆ ಬಿಜೈ ನಿವಾಸಿ ನೀಡಿದ ದೂರಿನಂತೆ ಮಂಗಳೂರು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪೈಕಿ ಪ್ರೀತಂ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಹೊಟೇಲ್ವೊಂದಕ್ಕೆ ಅಕ್ರಮ ಪ್ರವೇಶ ಮಾಡಿ ಹಾನಿಗೊಳಿಸಿದ ಪ್ರಕರಣವು ದಾಖಲಾಗಿದೆ. ನ್ಯಾಯಾಂಗ ಬಂಧನದಲ್ಲಿರುವ ಗೌರೀಶ್ ಎಂಬಾತನ ಸೂಚನೆಯಂತೆ ಆರೋಪಿಗಳು ಹಫ್ತಾ ಹಣಕ್ಕಾಗಿ ಬೆದರಿಕೆಯೊಡ್ಡಿದ್ದರು. ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಬರ್ಕೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಸುನೀಲ್ ವೈ. ನಾಯ್ಕ್ ಮತ್ತು ಸಬ್ ಇನ್‌ಸ್ಪೆಕ್ಟರ್ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News