×
Ad

ಕೃಷ್ಣಾಪುರದ ಮಿಸ್ಬಾಹ್ ಮಹಿಳಾ ಪದವಿ ಮತ್ತು ಶರಿಯಾ ಕಾಲೇಜಿನ ತರಗತಿ ಉದ್ಘಾಟನೆ

Update: 2016-07-18 21:57 IST

ಮಂಗಳೂರು, ಜು.18: ವಿಶ್ವದಾದ್ಯಂತ ಮಹಿಳಾ ಸಬಲೀಕರಣದ ಬಗ್ಗೆ ವಿಸ್ತತ ಸಂವಾದ ಚರ್ಚೆಗಳು ನಡೆಯುತ್ತಿದ್ದು, ನಿಜವಾದ ಸಬಲೀಕರಣಕ್ಕೆ ನೈತಿಕ ಶಿಕ್ಷಣ ಚಳವಳಿ ವ್ಯಾಪಕಗೊಳ್ಳುವ ಅಗತ್ಯ ಎಂದು ಉದ್ಯಮಿ, ಬೆಂಗಳೂರು ಫಿಝಾ ಗ್ರೂಪ್‌ನ ಮಾಲಕ ಹಾಜಿ ಬಿ.ಎಂ. ಫಾರೂಕ್ ಅಭಿಪ್ರಾಯಪಟ್ಟರು.

ಮಂಗಳೂರು ಕಾಟಿಪಳ್ಳದಲ್ಲಿ ನೂತನವಾಗಿ ಪ್ರಾರಂಭಗೊಂಡ ಮಿಸ್ಬಾಹ್ ಮಹಿಳಾ ಪದವಿ ಮತ್ತು ಶರಿಯಾ ಕಾಲೇಜಿನ ತರಗತಿ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಹಾಜಿ ಬಿ.ಎಂ.ಮುಮ್ತಾಝ್ ಅಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನಿ ಕಾಮಿಲ್, ಉಪಾಧ್ಯಕ್ಷ ಮೌಲಾನಾ ಅಬೂಸುಫ್ ಯಾನ್ ಮದನಿ, ಪ್ರಾಚಾರ್ಯ ಮುಹಮ್ಮದ್ ಆರ್ಿ ಸಂಸ್ಥೆಯ ವಿವಿಧ ಕೋರ್ಸ್‌ಗಳನ್ನೂ ಪರಿಚಯಿಸಿ ಮಾತನಾಡಿದರು.

ಟ್ರಸ್ಟಿಗಳಾದ ಅಬ್ದುಲ್ ಹಕೀಮ್  ಫಾಲ್ಕನ್, ಹಾಜಿ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಬಾವ ಕ್ರುದ್ದೀನ್ ಕಾಟಿಪಳ್ಳ, ಮುಹಮ್ಮದ್ ಮುಬೀನ್ ಅಲ್ ಜುಬೈಲ್, ಟಿ.ಎಚ್.ಮೆಹಬೂಬ್ ಅಲ್ ಜುಬೈಲ್, ಪಿ. ಇಸ್ಮಾಯೀಲ್ ಎಚ್.ಎನ್.ಜಿ.ಸಿ., ಮುಹಮ್ಮದ್ ಹಾರಿಸ್, ಕೆಸಿಎ್ ಸೌದಿ ಅರೇಬಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಾರೂಕ್ ಕಾಟಿಪಳ್ಳ, ಉಮರುಲ್ ಫಾರೂಕ್ ರೂಕ್ ಸಖಾಫಿ ಕಾಟಿಪಳ್ಳ, ಹಬೀಬುರ್ರಹ್ಮಾನ್ ಸಖಾಫಿ ಉಪಸ್ಥಿತರಿದ್ದರು.

ಸಮಾರಂಭದ ಅಂಗವಾಗಿ ನಡೆದ ವಿದ್ಯಾರ್ಥಿನಿಯರ ಪುನರ್‌ಮನನ ಶಿಬಿರದಲ್ಲಿ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಡಾ.ಮುಶ್ತರೀ ಬೇಗಂ ವಿಷಯ ಮಂಡಿಸಿ ಮಾತನಾಡಿದರು.

ಉಪನ್ಯಾಸಕಿಯರಾದ ರಂಜಿತಾ ಅತಿಥಿಗಳನ್ನು ಪರಿಚಯಿಸಿದರು. ಸನಾಹ್ ಹುಸೈನ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ಸಂಚಾಲಕ ಬಿ.ಎ. ನಝೀರ್ ಸ್ವಾಗತಿಸಿ ಉಪನ್ಯಾಸಕಿ ಶಾರದಮ್ಮ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News