ಸವಣೂರು ಮೊಗರು ಶಾಲೆಯಲ್ಲಿ 'ಗುಬ್ಬಚ್ಚಿ ಸ್ಪೀಕಿಂಗ್' ಆರಂಭ

Update: 2016-07-18 18:01 GMT

ಪುತ್ತೂರು, ಜು.18: ಇಂಗ್ಲೀಷ್ ಭಾಷೆ ಕಲಿಕೆಯಿಂದ ದೇಶ ವಿದೇಶಗಳ ಎಲ್ಲಾ ಭಾಗಗಳಲ್ಲೂ ವ್ಯವಹರಿಸಬಹುದಾಗಿದ್ದು, ಇಂದು ವ್ಯಾವಹಾರಿಕವಾಗಿ ಅತೀ ಅಗತ್ಯ. ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳ ಮಕ್ಕಳಿಗೂ ಇಂಗ್ಲೀಷ್ ಶಿಕ್ಷಣ ದೊರಕಬೇಕೆಂಬ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕನಸಾದ ಗುಬ್ಬಚ್ಚಿ ಸ್ಪೀಕಿಂಗ್ ಅನ್ನು ಶಾಲೆಗಳಲ್ಲಿ ಅನುಷ್ಠಾನ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸವಣೂರು ಗ್ರಾ.ಪಂ.ಅಧ್ಯಕ್ಷೆ ಬಿ.ಕೆ. ಇಂದಿರಾ ಹೇಳಿದರು.

ಅವರು ಸೋಮವಾರ ಪುತ್ತೂರು ತಾಲೂಕಿನ ಸವಣೂರು ಮೊಗರು ಹಿ.ಪ್ರಾ.ಶಾಲೆಯಲ್ಲಿ ಆರಂಭಿಸಲಾದ ‘ಗುಬ್ಬಚ್ಚಿ ಸ್ಪೀಕಿಂಗ್’ ಆಂಗ್ಲ ತರಗತಿ ಉದ್ಘಾಟಿಸಿ ಮಾತನಾಡಿದರು.

ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಸವಣೂರು ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಸರಕಾರಿ ಶಾಲೆಗಳ ಒಂದನೇ ತರಗತಿಯ ಮಕ್ಕಳ ಹೆಸರಿನಲ್ಲಿ ಎಫ್.ಡಿ. ಠೇವಣಿಯಿಡಲು ಸವಣೂರು ಗ್ರಾ.ಪಂ.ನಿರ್ಧರಿಸಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಅವರು ತಿಳಿಸಿದರು.

ಗ್ರಾ.ಪಂ.ಸದಸ್ಯ ಅಬ್ದುರ್ರಝಾಕ್ ಮಾತನಾಡಿ, ಪ್ರಸ್ತುತ ಸರಕಾರಿ ಶಾಲೆಗಳಲ್ಲಿ ಖಾಸಗಿ ಶಿಕ್ಷಣಗಳಿಗಿಂತಲೂ ಉತ್ತಮವಾದ ಬೋಧನೆ, ಸೌಲಭ್ಯ, ವಾತಾವರಣ ವ್ಯವಸ್ಥೆಗಳಿವೆ. ಈ ಕಾರಣದಿಂದ ಕೇವಲ ಬಡವರು ಮಾತ್ರವಲ್ಲದೆ ಎಲ್ಲಾ ವರ್ಗದ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಿಗೆ ಬರುವಂತಾಗಿದೆ ಇದು ಉತ್ತಮ ಬೆಳವಣಿಗೆ ಎಂದರು.

ವೇದಿಕೆಯಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಝಕಾರಿಯ, ಉಪಾಧ್ಯಕ್ಷೆ ಸುಮಿತ್ರ ,ಸದಸ್ಯರಾದ ದಿವ್ಯಲತಾ ,ಸುಮಿತ್ರಾ ,ಎಂ.ಅಬೂಬಕ್ಕರ್ ,ಅದ್ಯೇಸ್ ಅಹ್ಮದ್, ಅಶ್ರಫ್, ಹೇಮಾವತಿ, ಮೀನಾಕ್ಷಿ , ಶಿಕ್ಷಕರಾದ ಶ್ವೇತಾ ಎ.ಎಸ್., ವೇದಾವತಿ ಪಿ., ಮಮತಾ ಎನ್. ಉಪಸ್ಥಿತರಿದ್ದರು.

ಶಾಲಾ ಮುಖ್ಯಗುರು ಪುಷ್ಪಾ ಕುಮಾರಿ ಎನ್. ಸ್ವಾಗತಿಸಿ, ಕವಿತಾ ಎನ್. ವಂದಿಸಿದರು. ಸವಣೂರು ಕ್ಲಸ್ಟರ್ ಸಿಆರ್ ಪಿ ವೆಂಕಟೇಶ್ ಅನಂತಾಡಿ ಪ್ರಸ್ತಾವನೆಗೈದರು. ಶ್ರುತಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News