ಬಾಲಿವುಡ್‌ನ ಪ್ರಸಿದ್ಧ ಗಾಯಕಿ ಮುಬಾರಕ್ ಬೇಗಂ ನಿಧನ

Update: 2016-07-19 07:35 GMT

ಮುಂಬೈ, ಜು.19: ಬಾಲಿವುಡ್‌ನ ಪ್ರಸಿದ್ಧ ಗಾಯಕಿ ಮುಬಾರಕ್ ಬೇಗಂ(80 ವರ್ಷ) ದೀರ್ಘಕಾಲದ ಅಸೌಖ್ಯದಿಂದ ಮುಂಬೈ ಉಪನಗರ ಜೋಗೇಶ್ವರಿಯ ಸ್ವಗೃಹದಲ್ಲಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ.

ಮುಬಾರಕ್ ನಮ್ಮಂದಿಗೆ ಇಲ್ಲ. ಜೋಗೇಶ್ವರಿಯ ತಮ್ಮ ನಿವಾಸದಲ್ಲಿ ಸೋಮವಾರ ರಾತ್ರಿ 9:30ಕ್ಕೆ ನಿಧನರಾಗಿದ್ದಾರೆ. ಅವರು ಕೆಲವು ಸಮಯದಿಂದ ಅನಾರೋಗ್ಯ ಪೀಡಿತರಾಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

  ರಾಜಸ್ಥಾನದಲ್ಲಿ ಜನಿಸಿರುವ ಬೇಗಂ, 10 ರ ಹರೆಯದಲ್ಲಿ ಮುಂಬೈಗೆ ವಲಸೆ ಬಂದಿದ್ದರು. ಬೇಗಂ 1950-1970ರದ ದಶಕದಲ್ಲಿ ಬಾಲಿವುಡ್‌ನಲ್ಲಿ ಹಲವಾರು ಚಿತ್ರಗೀತೆಗಳು, ಡುಯೆಟ್ ಹಾಗೂ ಗಝಲ್‌ಗಳನ್ನು ಹಾಡಿ ಜನ ಮೆಚ್ಚುಗೆ ಪಡೆದಿದ್ದರು. 1955ರಲ್ಲಿ ಬಿಡುಗಡೆಯಾದ ದಿಲೀಪ್ ಕುಮಾರ್ ಹಾಗೂ ವೈಜಯಂತಿಮಾಲಾ ತಾರಾಗಣದ ‘ದೇವದಾಸ್’ ಚಿತ್ರಕ್ಕಾಗಿ ಹಾಡಿರುವ ‘‘ವೋ ನಾ ಆಯೇಗಿ ಪಲಟ್ ಕರ್’’ ಗೀತೆ ಬೇಗಂರಿಗೆ ಹೆಚ್ಚು ಆಪ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News