ಒಂದು ಕ್ಯಾಸಿನೊಗೆ 25 ಲಕ್ಷ ರೂ. ಲೆಕ್ಕದಲ್ಲಿ ಮಾಮೂಲಿ ಕೊಡಿ, ಇಲ್ಲದಿದ್ದರೆ ...

Update: 2016-07-19 07:44 GMT

ಪಣಜಿ, ಜು.19 ಗೋವಾದ ಪ್ರತಿಷ್ಠಿತ ಆಂಗ್ಲ ದೈನಿಕ ‘ಹೆರಾಲ್ಡ್’ ತನ್ನ ನಿರ್ಭೀತ ಪತ್ರಿಕೋದ್ಯಮಕ್ಕೆ ಒಂದು ಕಾಲದಲ್ಲಿ ಹೆಸರುವಾಸಿಯಾಗಿದ್ದರೂ ಕುಟುಕು ಕಾರ್ಯಾಚರಣೆಯೊಂದರಲ್ಲಿ ಚಿತ್ರೀಕರಿಸಲ್ಪಟ್ಟ ವೀಡಿಯೊವೊಂದರಲ್ಲಿ ಪತ್ರಿಕೆಯ ಮಾರಾಟ ವಿಭಾಗದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಒಬ್ಬರು ತನ್ನ ಬಾಸ್ ಆದೇಶದಂತೆ ಕ್ಯಾಸಿನೊ ಮಾಲಕನೊಬ್ಬನಿಗೆ ಪ್ರತೀ ತಿಂಗಳು 25 ಲಕ್ಷ ರೂ. ನೀಡಬೇಕು ಇಲ್ಲವೇ ಅದರ ವಿರುದ್ಧದ ಅಪಪ್ರಚಾರ ಮುಂದುವರಿಯುವುದು ಎಂದು ಧಮ್ಕಿ ಹಾಕಿರುವುದು ತಿಳಿದು ಬಂದಿದೆ. ಈ ವೀಡಿಯೊವನ್ನು ಪತ್ರಕರ್ತ ಮಾಯಾಭೂಷಣ್ ನಾಗ್ವೆನ್ಕರ್ ಬಿಡುಗಡೆ ಮಾಡಿದ್ದಾರೆ.

ಕ್ಯಾಸಿನೋ ಮ್ಯಾನೇಜರ್ ಅಥವಾ ಅದರ ಪ್ರತಿನಿಧಿ ಕಳೆದ ವರ್ಷ ರಹಸ್ಯ ಕ್ಯಾಮರಾ ಮೂಲಕ ಈ ಸಂಭಾಷಣೆಯನ್ನು ದಾಖಲಿಸಿದ್ದಿರಬೇಕೆಂದು ಅಂದಾಜಿಸಲಾಗಿದ್ದು ಅದಕ್ಕೆ ಸಬ್ ಟೈಟಲ್ ಗಳನ್ನು ಸೇರಿಸಿ ನಾಗ್ವೆನ್ಕರ್ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಗೋವಾದಲ್ಲಿ ಐದು ಕ್ಯಾಸಿನೊಗಳು ಕಾರ್ಯಾಚರಿಸುತ್ತಿದ್ದು ಅವುಗಳ ಸುತ್ತವಿರುವ ವಿವಾದಗಳು ಹಾಗೂ ಅವುಗಳನ್ನು ಸೂಕ್ತವಾಗಿ ನಿಯಂತ್ರಿಸಲು ಕ್ರಮಗಳ ಕೊರತೆಯಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ.

ಆದರೆ ಅವುಗಳಿರುವ ಪರಿಸ್ಥಿತಿಯ ಲಾಭ ಪಡೆಯಲು ಹೆರಾಲ್ಡ್‌ನಂತಹ ಪತ್ರಿಕಾ ಸಂಸ್ಥೆ ಪ್ರಯತ್ನ ನಡೆಸಿ ತನ್ನ ಜಾಹೀರಾತು ಆದಾಯವನ್ನು ಹೆಚ್ಚಿಸಲು ಯತ್ನಿಸಿರುವುದು ನಿಜಕ್ಕೂ ಆತಂಕಕಾರಿಯೆಂದು ‘ದಿ ಹೂಟ್’ ವರದಿಯೊಂದು ತಿಳಿಸಿದೆ.

ಈ ಬಹಿರಂಗಗೊಂಡಿರುವ ವೀಡಿಯೊ ವಿಚಾರವಾಗಿ ಹೆರಾಲ್ಡ್ ಪತ್ರಿಕೆಯ ಸಂಪಾದಕ ಸುಜಯ್ ಗುಪ್ತಾ ತಮ್ಮ ಮುಖಪುಟ ಸಂಪಾದಕೀಯದಲ್ಲಿ ಪತ್ರಿಕೆಗಾದ ಮಾನಹಾನಿಯನ್ನು ತಡೆಯಲು ಪ್ರಯತ್ನ ನಡೆಸಿರುವುದು ಕಾಣಿಸುತ್ತಿದೆಯಾದರೂ ಅದು ತಮ್ಮದೇ ಪತ್ರಿಕೆಯ ರಹಸ್ಯ ವ್ಯವಹಾರಗಳಿಂದ ತಮ್ಮನ್ನು ದೂರಗೊಳಿಸುವ ಒಂದು ಕ್ಷೀಣ ಯತ್ನವೆಂದೇ ಹೇಳಬಹುದು ಎಂದು ವರದಿ ಹೇಳಿದೆ.

ಪತ್ರಿಕೆಯ ಹಲವಾರು ಮಾಜಿ ಉದ್ಯೋಗಿಗಳು ಈ ವೀಡಿಯೊ ನೋಡಿ ಆಘಾತ ವ್ಯಕ್ತಪಡಿಸಿದರೆ, ಅದರ ಈಗಿನ ಯುವ ಉದ್ಯೋಗಿಗಳು ಈ ಬೆಳವಣಿಗೆಯಿಂದ ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆಂಬುದು ನಿರ್ವಿವಾದವೆಂದು, ದಿ ಹೂಟ್ ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. 


ವೀಡಿಯೊ ನೋಡಿ 

Full ViewFull ViewFull ViewFull ViewFull ViewFull ViewFull View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News