×
Ad

ಜನರು ಬೇಡಿಕೆ ಇಟ್ಟರೆ ಸರಕಾರದ ಬುಡಮೇಲು ಕೃತ್ಯಕ್ಕಿಳಿದವರಿಗೆ ಗಲ್ಲು ಶಿಕ್ಷೆ: ಎರ್ದೊಗಾನ್

Update: 2016-07-19 14:59 IST

  ಇಸ್ತಾಂಬುಲ್,ಜುಲೈ 19: ಜನರು ಬೇಡಿಕೆ ಮುಂದಿರಿಸಿದರೆ ವಿಫಲ ಸೇನಾ ದಂಗೆಯಲ್ಲಿ ಭಾಗವಹಿಸಿದವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುವುದು ಎಂದು ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಹೇಳಿದ್ದಾರೆಂದುವರದಿಯಾಗಿದೆ. ಜನರು ಬೇಡಿಕೆ ಮುಂದಿಟ್ಟರೆ ಯಾವ ಕಾರಣಕ್ಕೂ ಅದಕ್ಕೆ ಬೆನ್ನು ಹಾಕುವುದಿಲ್ಲ. ಸರಕಾರವನ್ನು ಕಿತ್ತೊಗೆಯಲು ಯತ್ನನಡೆಸಿದವರಿಗೆ ಗಲ್ಲುಶಿಕ್ಷೆ ನೀಡಬೇಕೆಂದು ಜನರು ಆಗ್ರಹಿಸಿದರೆ ಅದನ್ನು ಜಾರಿಗೊಳಿಸಲಾಗುವುದು ಎಂದು ಸೇನಾ ದಂಗೆಯ ಯತ್ನವನ್ನು ವಿರೋಧಿಸಿ ಏರ್ಪಡಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಎರ್ದೊಗಾನ್ ಹೇಳಿದರೆಂದು ವರದಿ ತಿಳಿಸಿದೆ.

 ದೇಶದಲ್ಲಿ ಗಲ್ಲುಶಿಕ್ಷೆಯನ್ನು ಮತ್ತೆ ಆರಂಭಿಸಬೇಕೆಂದು ಟರ್ಕಿ ಪಾರ್ಲಿಮೆಂಟ್ ತೀರ್ಮಾನಿಸಿದರೆ ಕೂಡಲೇ ಅದು ಅಂಗೀಕಾರಗೊಳ್ಳಲಿದೆ. ಜಗತ್ತಿನ ಬಹಳಷ್ಟು ಕಡೆಗಳಲ್ಲಿ ಗಲ್ಲು ಶಿಕ್ಷೆ ಜಾರಿಯಲ್ಲಿದೆ ಅದನ್ನು ಮತ್ತೆ ಆರಂಭಿಸಲು ಟರ್ಕಿಗೂ ಸಾಧ್ಯವಿದೆ ಎಂದು ಎರ್ದೊಗಾನ್ ಹೇಳಿದ್ದಾರೆ.

 ಸರಕಾರ, ರಾಷ್ಟ್ರೀಯ ಭದ್ರತಾ ಕೌನ್ಸಿಲ್‌ನ ಸಭೆನಡೆಸಿದ ನಂತರ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಿದೆ ಹಾಗೂ ಅದನ್ನು ಕೂಡಲೇ ಘೋಷಿಸಿ, ಜಾರಿಗೆ ತರಲಾಗುವುದೆಂದು ಎರ್ದೊಗಾನ್ ಈ ಸಂದರ್ಭದಲ್ಲಿ ಹೇಳಿದರೆಂದು ತಿಳಿದುಬಂದಿದೆ. ಕ್ಷಿಪ್ರ ವಿಫಲ ಸೇನಾ ದಂಗೆಯಲ್ಲಿ ಪಾತ್ರವಹಿಸಿದ್ದಾರೆನ್ನಲಾದ ಫತೇಉಲ್ಲಾ ಗುಲೇನ್‌ರನ್ನು ಬಿಟ್ಟುಕೊಡಲು ಅಮೆರಿಕಾ\ದೊಂದಿಗೆ ಆಗ್ರಹಿಸಲಾಗುವುದು ಎಂದು ಪ್ರತಿಭಟನಾ ಸಭೆಯಲ್ಲಿ ಜನರನ್ನುದ್ದೇಶಿಸಿ ರಿಸೆಪ್ ತಯ್ಯಿಪ್ ಎರ್ದೊಗಾನ್ ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News