×
Ad

ಮೆಲ್ಬೋರ್ನ್ : ಮಗುವಿನೊಂದಿಗೆ ಕಟ್ಟಡದಿಂದ ಹಾರಿ ಭಾರತೀಯ ಟೆಕ್ಕಿಯ ಪತ್ನಿ ಆತ್ಮಹತ್ಯೆ

Update: 2016-07-19 16:41 IST

ಮೆಲ್ಬರ್ನ್, ಜು. 19: ಭಾರತೀಯ ಮಹಿಳೆಯೊಬ್ಬರು ತನ್ನ ನಾಲ್ಕು ತಿಂಗಳ ಶಿಶುವಿನೊಂದಿಗೆ ಇಲ್ಲಿನ ತನ್ನ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

31 ವರ್ಷದ ಸುಪ್ರಜಾ ಶ್ರೀನಿವಾಸ್ ಮತ್ತು ಆಕೆಯ ಮಗ ಶ್ರೀಹರನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 29 ಮಹಡಿಗಳ ಸಿಟಿ ಪಾಯಿಂಟ್ ಅಪಾರ್ಟ್‌ಮೆಂಟ್ ಕಟ್ಟಡದ ತಳದಲ್ಲಿ ಅವರ ಮೃತದೇಹಗಳು ಗುರುವಾರ ಪತ್ತೆಯಾಗಿವೆ.

ಅವರ ಪಾರ್ಥಿವ ಶರೀರಗಳನ್ನು ಭಾರತಕ್ಕೆ ಕರೆತರಲು ಏರ್ಪಾಡುಗಳನ್ನು ಮಾಡಲಾಗುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಸುಪ್ರಜಾರ ಗಂಡ ಟೆಕ್ ಮಹೀಂದ್ರದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಗನ್ನಾರಾಮ್ ಶ್ರೀನಿವಾಸ್ ಮೃತದೇಹಗಳು ಪತ್ತೆಯಾದ ಸ್ಥಳದಲ್ಲಿ ಕುಸಿದು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ದಂಪತಿ ಐದು ವರ್ಷದ ಮಗಳೂ ಇದ್ದಾಳೆ.

ತಮ್ಮ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಬಿದ್ದು ಮಹಿಳೆ ಮತ್ತು ಮಗು ಮೃತಪಟ್ಟಿರಬೇಕೆಂದು ನಂಬಲಾಗಿದೆ ಎಂದು ವಿಕ್ಟೋರಿಯ ಪೊಲೀಸ್‌ನ ವಕ್ತಾರೆ ಹೇಳಿದರು.

ಘಟನೆಗೆ ಸಂಬಂಧಿಸಿ ಪೊಲೀಸರು ಯಾರನ್ನೂ ಹುಡುಕುತ್ತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News